• About us
  • Contact us
  • Disclaimer
Saturday, July 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ತಾಯಿಯ ಕಾಲಿನಿಂದ ಹಾವಿನ ವಿಷ ಹೀರಿದ ಮಗಳು ಘಟನೆಗೆ ದೊಡ್ಡ ತಿರುವು; ಕಾಲಿಗೆ ಕಚ್ಚಿದ್ದು ನಾಗರಹಾವು ಅಲ್ಲ!

Coastal Times by Coastal Times
March 24, 2023
in ಕರಾವಳಿ
ತಾಯಿಯ ಕಾಲಿನಿಂದ ಹಾವಿನ ವಿಷ ಹೀರಿದ ಮಗಳು ಘಟನೆಗೆ ದೊಡ್ಡ ತಿರುವು; ಕಾಲಿಗೆ ಕಚ್ಚಿದ್ದು ನಾಗರಹಾವು ಅಲ್ಲ!
430
VIEWS
WhatsappTelegramShare on FacebookShare on Twitter

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಯಿ ಕಾಲಿಗೆ ಹಾವು ಕಚ್ಚಿದಾಗ ಮಗಳು ರಕ್ತ ಹೀರಿ ತಾಯಿಯನ್ನು ರಕ್ಷಣೆ ಮಾಡಿದ ಘಟನೆಗೆ ದೊಡ್ಡ ತಿರುವು ದೊರಕಿದೆ. ಈ ಘಟನೆಯಲ್ಲಿ ಮಹಿಳೆಗೆ ತಾಯಿಗೆ ಕಚ್ಚಿರುವುದು ನಾಗರ ಹಾವು ಅಲ್ಲ ಮಲಬಾರ್ ಪಿಟ್ ವೈಪರ್ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ‌. ವಿಷಕಾರಿ ಆಗಿರುವ ಈ ಹಾವು ಬಹಳ ನಂಜುಕಾರಿ. ನಂಜು ಹೊರಸೂಸುವ ಈ ಹಾವಿನ ಕಡಿತದಿಂದ ಸಾವು ಸಂಭವ ಕಡಿಮೆಯಾದರೂ ಹಾವು ಕಡಿದ ಜಾಗದಲ್ಲಿ ನಂಜು ಊತ ಏರ್ಪಡುತ್ತದೆ. ತಾಯಿಗೆ ಚಿಕಿತ್ಸೆ ನೀಡಿದ ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದು, ಮಮತಾ ರೈ ಕಾಲಿಗೆ ಕಚ್ಚಿದ ಹಾವು ಮಲಬಾರ್ ಪಿಟ್ ವೈಪರ್ ಎನ್ನುವುದುನ್ನು ಸ್ಪಷ್ಟ ಪಡಿಸಿದ್ದಾರೆ.

ಅತ್ಯಂತ ಕಡಿಮೆ ಪ್ರಮಾಣದ ವಿಷ ಹೊಂದಿರುವ ಮಲಬಾರ್ ಪಿಟ್ ವೈಪರ್‌ನ ಕಡಿತಕ್ಕೊಳಗಾದ ತಾಯಿ ಮಮತಾ ರೈ ಒಂದು ದಿನದ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.ಅತ್ಯಂತ ಕಡಿಮೆ ಪ್ರಮಾಣದ ವಿಷ ಹೊಂದಿರುವ ಮಲಬಾರ್ ಪಿಟ್ ವೈಪರ್‌ನ ಕಡಿತಕ್ಕೊಳಗಾದ ತಾಯಿ ಮಮತಾ ರೈ ಒಂದು ದಿನದ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ಘಟನೆ ನಡೆದಿದ್ದು, ಮೊದಲು ನಾಗರಹಾವು ಕಡಿತಕ್ಕೊಳಗಾದ ತಾಯಿಗೆ ಪುತ್ರಿಯೇ ಬಾಯಿಯಿಂದ ವಿಷ ಹೀರಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿರುವ ಅಪರೂಪದ ಘಟನೆ ಎಂದು ಸುದ್ದಿ ಯಾಗಿತ್ತು. ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಸ್ಕೌಟ್ಸ್‌ ಮತ್ತು ಗೈಡ್ಸ್ ನ ರೇಂಜರ್‌ ಕೂಡ ಆಗಿರುವ ಶ್ರಮ್ಯಾ ರೈ ತನ್ನ ತಾಯಿ ಕೆಯ್ಯೂರು ಗ್ರಾ.ಪಂ. ಸದಸ್ಯೆಯಾಗಿರುವ ಮಮತಾ ರೈ ಅವರನ್ನು ಅಪಾಯದಿಂದ ಪಾರು ಮಾಡಿದ್ದರು.

ಕೆಯ್ಯೂರಿನ ತನ್ನ ಮನೆಯ ಸನಿಹದಲ್ಲೇ ಇರುವ ತಾಯಿ ಮನೆಗೆ ಶ್ರಮ್ಯಾಳ ತಾಯಿ, ಕೆಯ್ಯೂರು ಗ್ರಾ.ಪಂ. ಸದಸ್ಯೆಯಾಗಿರುವ ಮಮತಾ ರೈ ಹೋಗಿದ್ದರು. ಅಲ್ಲಿ ಪಂಪ್‌ ಸ್ವಿಚ್‌ ಹಾಕಲೆಂದು ಮಮತಾ ರೈ ಅವರು ತೋಟಕ್ಕೆ ತೆರಳಿದ್ದರು. ಸ್ವಿಚ್‌ ಹಾಕಿ ಮರಳಿ ಬರುತ್ತಿರುವಾಗ ಕೆರೆಯ ಪಕ್ಕದಲ್ಲಿ ಹಾವನ್ನು ತುಳಿದಿದ್ದು, ಹಾವು ಅವರಿಗೆ ಕಚ್ಚಿತ್ತು. ಕೂಡಲೇ ಮನೆಗೆ ಮರಳಿ ಕೆಲಸದಾಳಿನ ಸಹಾಯದಿಂದ ಹಾವು ಕಚ್ಚಿದ ಸ್ಥಳದಿಂದ ಮೇಲ್ಭಾಗಕ್ಕೆ ವಿಷ ಏರದಂತೆ ಪಟ್ಟಿ ಕಟ್ಟಿದ್ದರು. ಆದರೆ ಇದು ಹೆಚ್ಚು ಪ್ರಯೋಜನಕಾರಿ ಆಗಲಾರದು ಎಂದರಿತ ಶ್ರಮ್ಯಾ ರೈ ಹಾವು ಕಚ್ಚಿದ ಸ್ಥಳದಲ್ಲಿ ಬಾಯಿಯೂರಿ, ಹೀರಿ ವಿಷ ತೆಗೆದಿದ್ದಾರೆ. ಅದಾದ ಬಳಿಕ ಮಮತಾ ರೈ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶ್ರಮ್ಯಾಳ ಸಮಯ ಪ್ರಜ್ಞೆಯಿಂದಾಗಿ ಮಮತಾ ರೈ ಅವರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ.
‘ಹಾವು ಕಚ್ಚಿದ ವಿಚಾರ ವನ್ನು ತಾಯಿ ಹೇಳಿದರು. ಪಟ್ಟಿ ಕಟ್ಟಿದರೂ ನನಗೆ ವಿಶ್ವಾಸ ಮೂಡದ ಕಾರಣ ಬಾಯಿಯಿಂದಲೇ ಹೀರಿ ವಿಷ ತೆಗೆದು ಹಾಕಿದೆ. ಆಸ್ಪತ್ರೆಯಲ್ಲಿ ವೈದ್ಯರು ವಿಷ ತೆಗೆದದ್ದು ಒಳ್ಳೆಯದಾಯಿತು ಎಂದಿದ್ದಾರೆ. ಇದು ನನ್ನ ಮೊದಲ ಅನುಭವ. ಈ ಹಿಂದೆ ಕೇಳಿ ಹಾಗೂ ಸಿನೆಮಾಗಳಲ್ಲಿ ನೋಡಿ ತಿಳಿದಿದ್ದ ಮಾಹಿತಿಯ ಆಧಾರದಲ್ಲಿ ಇಂತಹ ಪ್ರಥಮ ಚಿಕಿತ್ಸೆ ನಡೆಸುವ ಧೈರ್ಯ ಮಾಡಿದೆ’ ಎಂದು ಶ್ರಮ್ಯಾ ರೈ ಹೇಳಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: 23 ಪ್ರಕರಣಗಳಲ್ಲಿ ವಾರೆಂಟ್ ಎದುರಿಸುತ್ತಿದ್ದ ಆರೋಪಿಯ ಬಂಧನ

Next Post

ಮಂಗಳೂರು: ನಗರದ ಕಸ‌ವಿಲೇವಾರಿಗೆ ವಾರ್ ರೂಂ – ಶಾಸಕ ವೇದವ್ಯಾಸ್ ಕಾಮತ್

Related Posts

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಕರಾವಳಿ

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
2
ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ
ಕರಾವಳಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
249
Next Post
ಮಂಗಳೂರು: ನಗರದ ಕಸ‌ವಿಲೇವಾರಿಗೆ ವಾರ್ ರೂಂ – ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು: ನಗರದ ಕಸ‌ವಿಲೇವಾರಿಗೆ ವಾರ್ ರೂಂ - ಶಾಸಕ ವೇದವ್ಯಾಸ್ ಕಾಮತ್

Discussion about this post

Recent News

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
57
ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

July 24, 2026
43
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

ಕೆಲಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಕಡಬದ ಯುವಕ ಸೆರೆ

July 24, 2026
ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

July 24, 2026
ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d