• About us
  • Contact us
  • Disclaimer
Saturday, August 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಂಟ್ವಾಳ: ಕಾರಿಂಜೇಶ್ವರ ಬೆಟ್ಟವನ್ನು ಕೆಲವೇ 30 ನಿಮಿಷಗಳಲ್ಲಿ ಏರಿದ ಕರ್ನಾಟಕದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್

Coastal Times by Coastal Times
March 24, 2025
in ಕರಾವಳಿ
ಬಂಟ್ವಾಳ: ಕಾರಿಂಜೇಶ್ವರ ಬೆಟ್ಟವನ್ನು ಕೆಲವೇ 30 ನಿಮಿಷಗಳಲ್ಲಿ ಏರಿದ ಕರ್ನಾಟಕದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್
41
VIEWS
WhatsappTelegramShare on FacebookShare on Twitter

ಬಂಟ್ವಾಳ: ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಗುರುತಿಸಲ್ಪಟ್ಟ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ಭಾನುವಾರ ಬೆಳಗ್ಗೆ ಬಂಟ್ವಾಳ ಸಮೀಪದ ಕಾರಿಂಜೇಶ್ವರ ಬೆಟ್ಟವನ್ನು ಬರಿಗೈಯಲ್ಲಿ ಕೆಲವೇ ನಿಮಿಷಗಳಲ್ಲಿ ಏರುವ ಮೂಲಕ ಗಮನ ಸೆಳೆದಿದ್ದಾರೆ. ಮೊದಲ ಬಾರಿಗೆ ಈ ಬೆಟ್ಟವನ್ನೇರಿದ ಜ್ಯೋತಿರಾಜ್ ಸಾಹಸಕ್ಕೆ ನೆರೆದಿದ್ದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾನುವಾರ ಬೆಳಗ್ಗೆ 10 ಗಂಟೆಗೆ ಪುರಾಣ ಪ್ರಸಿದ್ಧ ಕಾರಿಂಜೇಶ್ವರನ ಬೆಟ್ಟದ ಮೇಲೆ ಹತ್ತಲು ಆರಂಭಿಸಿದ ಜ್ಯೋತಿರಾಜ್, ಸುಡುವ ಬಿಸಲನ್ನೂ ಲೆಕ್ಕಿಸದೆ ಕೇವಲ ಅರ್ಧ ಗಂಟೆಗೂ ಕಡಿಮೆ ಅವಧಿಯಲ್ಲೇ ಬೆಟ್ಟದ ಮೇಲಿನ ಈಶ್ವರನ ದೇವಾಲಯದ ಮುಂದೆ ತಲುಪಿ ದೇವರಿಗೆ ನಮಸ್ಕರಿಸಿದರು. ನೋಡ ನೋಡುತ್ತಿದ್ದಂತೆ ಬೆಟ್ಟ ಏರಿದ ಜ್ಯೋತಿರಾಜ್ ಅವರ ಕಸರತ್ತು ಜನರ ಮೈಜುಮ್ಮೆನಿಸುವಂತಿತ್ತು.

350 ಅಡಿ ಎತ್ತರದ ಬಂಡೆ: ಜ್ಯೋತಿರಾಜ್ ಏರಿದ ಕಾರಿಂಜ ಬೆಟ್ಟದ ಬೃಹತ್ ಬಂಡೆಯು ಸುಮಾರು 350 ಅಡಿ ಎತ್ತರವಿದೆ. ಯೂಟ್ಯೂಬ್​ನಲ್ಲಿ ಶಿವರಾತ್ರಿ ಹಬ್ಬದ ವಿಡಿಯೋ ನೋಡುತ್ತಿದ್ದಾಗ ಕಾರಿಂಜ ಕ್ಷೇತ್ರದ ಕುರಿತು ತಿಳಿದಿದ್ದ ಅವರು, ಸಾಕಷ್ಟು ಜನರ ಬೇಡಿಕೆಯಂತೆ ಬೆಟ್ಟ ಹತ್ತಲು ನಿರ್ಧರಿಸಿದ್ದರು. ಶನಿವಾರವೇ ಇದಕ್ಕಾಗಿ ಪ್ರಾಕ್ಟೀಸ್ ಕೂಡ ಮಾಡಿದ್ದರು. ಆಗ ಬೆಟ್ಟವೇರಲು ಒಂದು ತಾಸು ತೆಗೆದುಕೊಂಡಿದ್ದ ಅವರು, ಭಾನುವಾರ ಅರ್ಧ ಗಂಟೆಯಲ್ಲೇ ಕ್ರಮಿಸಿದರು.

11 ಬಾರಿ ಆಪರೇಷನ್, ಕೈ ಕಾಲಿಗೆ ರಾಡ್ ! ”ಶವಗಳನ್ನು ಹುಡುಕಲು ಅನೇಕ ಬಾರಿ ಜೋಗ ಜಲಪಾತದಲ್ಲಿ ಇಳಿದು, ಬಳಿಕ ಏರಿದ್ದೇನೆ. ಒಮ್ಮೆ ಜಲಪಾತದ ಕಂದಕಕ್ಕೆ ಬಿದ್ದು, ಎರಡು ದಿನ ಕಾಣೆಯಾಗಿದ್ದೆ. ಇಲ್ಲಿಯ ತನಕ ಗಾಯಗಳಿಂದ ನನಗೆ ಒಟ್ಟು 11 ಆಪರೇಷನಗಳು ಆಗಿವೆ. ಕೈ, ಕಾಲಿಗೆ 4 ರಾಡ್ ಹಾಕಿಸಿಕೊಂಡಿದ್ದೇನೆ. ಆದರೆ, ಬಂಡೆಗಳನ್ನು ಹತ್ತಿ ಬಿದ್ದಿರುವುದು ಕಡಿಮೆ. ಬೇರೆಯವರನ್ನು ಕಾಪಾಡಲು ಹೋದಾಗಲೇ ಬಿದ್ದು ಗಾಯಳಾಗಿರುವುದ ಹೆಚ್ಚು. ಜೋಗದಲ್ಲೇ ಒಟ್ಟು 9 ಮೃತದೇಹಗಳನ್ನು ಹೊರತೆಗೆದಿದ್ದೇನೆ. ಜಲಪಾತವನ್ನು 18 ಬಾರಿ ಇಳಿದು, ಏರಿದ್ದೇನೆ. ಈ ಪೈಕಿ 3 ಬಾರಿ ಶೂಟಿಂಗ್​ ಸಂಬಂಧ ಹತ್ತಿದ್ದೆ. ಅಲ್ಲದೆ, ಕೆರೆ, ಬಾವಿಯಲ್ಲಿ ಯಾರೇ ಬಿದ್ದಾಗಲೂ ನೆರವಾಗಿದ್ದೇನೆ” ಎಂದು ಜ್ಯೋತಿರಾಜ್​ ವಿವರಿಸಿದರು.

ಮಂಗಳೂರಿನಲ್ಲಿ ಎತ್ತರದ ಬಹುಮಹಡಿ ಕಟ್ಟಡ ಏರಬೇಕೆಂಬ ಬಯಕೆ  ಕಳೆದ ವರ್ಷ ಬೆಳ್ತಂಗಡಿಯ ಗಡಾಯಿಕಲ್ಲು ಬೆಟ್ಟ ಹತ್ತಿದ್ದೆ. ಹಾಗೆಯೇ ಉಡುಪಿ, ಮಂಗಳೂರಿನ ಬಹುಮಹಡಿಯ ಕಟ್ಟಡವನ್ನು ಏರಿದ್ದೇನೆ. ಅದರಲ್ಲಿ ಬಂದ ಹಣದಿಂದ ರೋಪು, ಸೇಫ್ಟಿ ಜಾಕೆಟ್​​ ಖರೀದಿಸಿದ್ದೇನೆ. ಮಲೆನಾಡು ನನಗೆ ಅತ್ಯಂತ ಇಷ್ಟದ ಊರು. ನಾನು ದೈವ, ದೇವರಲ್ಲಿ ನಂಬಿಕೆಯುಳ್ಳವ. ಧರ್ಮಸ್ಥಳ, ಕೊರಗಜ್ಜನ ಕ್ಷೇತ್ರ ಸೇರಿ ಹಲವು ದೈವ, ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇನೆ. ಮಂಗಳೂರಿನಲ್ಲಿರುವ ಅತಿ ಎತ್ತರದ ಬಹುಮಹಡಿ ಕಟ್ಟಡವನ್ನು ಏರಬೇಕೆಂಬ ಬಯಕೆ ಇದೆ. ಕಳೆದ ಬಾರಿ ಇದಕ್ಕೆ ಸಂಬಂಧಪಟ್ಟವರಿಂದ ಅನುಮತಿ ಕೋರಿದ್ದೆ, ಆದರೆ ಸಿಕ್ಕಿರಲಿಲ್ಲ. ಈ ಸಲವೂ ಅನುಮತಿ ಕೇಳಿದ್ದು, ಇದುವರೆಗೆ ಸಿಕ್ಕಿಲ್ಲ” ಎಂದು ತಿಳಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಕೇರಳ ಉದ್ಯಮಿ ದರೋಡೆ ಪ್ರಕರಣ: ಸ್ಥಳ ಮಹಜರ್‌ ವೇಳೆ ಪೊಲೀಸರ ಮೇಲೆ ಹಲ್ಲೆ ಆರೋಪಿ ಕಾಲಿಗೆ ಗುಂಡೇಟು

Next Post

ಮಂಗಳೂರು: ಅತ್ತಾವರ-ಬಾಬುಗುಡ್ಡ ದಲ್ಲಿ ‘ರೋಹನ್ ಕಾರ್ಪೊರೇಷನ್’ನ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ಗೆ ಶಿಲಾನ್ಯಾಸ

Related Posts

ತುಳುನಾಡಿನಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ ಸಂಭ್ರಮ: ಮೂಲಸ್ಥಾನ, ನಾಗಬನಗಳಲ್ಲಿ ಕುಟುಂಬಸ್ಥರಿಂದ ಹಾಲು-ಎಳನೀರು ಸಮರ್ಪಣೆ
ಕರಾವಳಿ

ತುಳುನಾಡಿನಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ ಸಂಭ್ರಮ: ಮೂಲಸ್ಥಾನ, ನಾಗಬನಗಳಲ್ಲಿ ಕುಟುಂಬಸ್ಥರಿಂದ ಹಾಲು-ಎಳನೀರು ಸಮರ್ಪಣೆ

August 18, 2026
10
ರೋಹನ್ ಕಾರ್ಪೊರೇಶನ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ – ಜ್ಯಾಕ್ ಅನಿಲ್ ಅವರಿಗೆ ‘ಕೃಷಿ ವೃಕ್ಷಾನ್ವೇಷಕ ಸಾಧಕ’ ಪ್ರಶಸ್ತಿ ಪ್ರದಾನ
ಕರಾವಳಿ

ರೋಹನ್ ಕಾರ್ಪೊರೇಶನ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ – ಜ್ಯಾಕ್ ಅನಿಲ್ ಅವರಿಗೆ ‘ಕೃಷಿ ವೃಕ್ಷಾನ್ವೇಷಕ ಸಾಧಕ’ ಪ್ರಶಸ್ತಿ ಪ್ರದಾನ

August 15, 2026
35
Next Post
ಮಂಗಳೂರು: ಅತ್ತಾವರ-ಬಾಬುಗುಡ್ಡ ದಲ್ಲಿ ‘ರೋಹನ್ ಕಾರ್ಪೊರೇಷನ್’ನ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ಗೆ ಶಿಲಾನ್ಯಾಸ

ಮಂಗಳೂರು: ಅತ್ತಾವರ-ಬಾಬುಗುಡ್ಡ ದಲ್ಲಿ ‘ರೋಹನ್ ಕಾರ್ಪೊರೇಷನ್’ನ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ‘ರೋಹನ್ ನೆಸ್ಟ್’ಗೆ ಶಿಲಾನ್ಯಾಸ

Discussion about this post

Recent News

ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ- ಆಟೋ ರಿಕ್ಷಾ ಚಾಲಕನ ಬಂಧನ

ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ- ಆಟೋ ರಿಕ್ಷಾ ಚಾಲಕನ ಬಂಧನ

August 22, 2026
19
ಬೆಳ್ತಂಗಡಿ: ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ

ಬೆಳ್ತಂಗಡಿ: ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ

August 22, 2026
17
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ- ಆಟೋ ರಿಕ್ಷಾ ಚಾಲಕನ ಬಂಧನ

ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ- ಆಟೋ ರಿಕ್ಷಾ ಚಾಲಕನ ಬಂಧನ

August 22, 2026
ಬೆಳ್ತಂಗಡಿ: ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ

ಬೆಳ್ತಂಗಡಿ: ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ

August 22, 2026
94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ

94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ

August 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d