ಬೆಂಗಳೂರು: ಡೇಟಿಂಗ್ ಆ್ಯಪ್ನಲ್ಲಿ ಬ್ಯಾಂಕ್ ಮ್ಯಾನೇಜರ್ನನ್ನು ಪರಿಚಯಿಸಿಕೊಂಡ ಯುವತಿ ಸಲುಗೆ ಬೆಳೆಸಿಕೊಂಡು ಹಂತ – ಹಂತವಾಗಿ 6 ಕೋಟಿ ರೂಪಾಯಿ ಟೋಪಿ ಹಾಕಿರುವ ಘಟನೆ ನಡೆದಿರುವುದು ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಹರಿಶಂಕರ್ ಎಂಬುವರು ಹಣ ಕಳೆದುಕೊಂಡಿರುವ ವ್ಯಕ್ತಿ. ಹನುಮಂತನಗರ ಇಂಡಿಯನ್ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿದ್ದು, ಮದ್ವೆಯಾಗಿ ಮನೆತುಂಬಾ ಮಕ್ಕಳು ಓಡಾಡ್ತಿರುವ ಕಾಲದಲ್ಲೇ ಈ ಹರಿಶಂಕರ ಇದೀಗ ದೊಡ್ಡದೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅನಿತಾ ಎಂಬ ಠೇವಣಿದಾರರ ಎಫ್ಡಿ ಖಾತೆಯ ಮೇಲೆ ಸರಿಸುಮಾರು 6 ಕೋಟಿಯಷ್ಟು ಲೋನನ್ನ ಮಾಡಿ ಇದೀಗ ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.
ಹರಿಶಂಕರ್ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಡೇಟಿಂಗ್ ಆ್ಯಪ್ನಲ್ಲಿ ತನ್ನ ಹೆಸರನ್ನ ನೊಂದಾಯಿಸಿಕೊಂಡಿದ್ದ. ಈ ವೇಳೆ ಯುವತಿಯನ್ನು ಪರಿಚಯಿಸಿಕೊಂಡ ಇವರು ಪರಿಚಯ ಬೆಳೆಸಿಕೊಂಡಿದ್ದಾನೆ. ಯುವತಿ ಸಹ ರಸಭರಿತವಾಗಿ ಹರಿಶಂಕರನ ಮೊಬೈಲ್ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಳು. ಚೆಂದದ ಯುವತಿಯ ಯೌವನದ ಮೆಸೇಜ್ಗೆ ಮನಸೋತು ತನ್ನ ಬಳಿಯಿದ್ದ 12 ಲಕ್ಷ ಹಣವನ್ನ ಯುವತಿಯ ಅಕೌಂಟ್ಗೆ ಕಳುಹಿಸಿದ್ದ. ಯುವತಿ ನನಗೆ ಇನ್ನೂ ಹಣಬೇಕು, ಅದೆಷ್ಟು ಪ್ರೀತಿಬೇಕು ಕೇಳು ಅಂದಿದ್ದಳಷ್ಟೇ. ಅಷ್ಟಕ್ಕೆ ಹರಿಶಂಕರ್ ತಾನು ಕೆಲಸ ಮಾಡ್ತಿದ್ದ ಇಂಡಿಯನ್ ಬ್ಯಾಂಕ್ನ ಠೇವಣಿದಾರರಾದ ಅನಿತಾ ಎಂಬವರ ಎಫ್ಡಿ ಅಕೌಂಟ್ ಮೇಲೆ ಆರು ಕೋಟಿಯಷ್ಟು ಸಾಲವನ್ನ ಮಾಡಿದ್ದಾನೆ. ಆ ಆರು ಕೋಟಿಯನ್ನ ಡೇಟಿಂಗ್ ಬೆಡಗಿಗೆ ನೀಡಿದ್ದಾನೆ. ಡೇಟಿಂಗ್ ಬೆಡಗಿಯ ಬಣ್ಣದ ಮಾತಿಗೆ ತಣ್ಣಗೆ ಕೋಟಿ ಕೋಟಿ ಸುರಿದು ಇದೀಗ ಹನುಮಂತನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹರಿಶಂಕರನ ಪ್ರೇಮದಾಟ ಇದೀಗ ಆತನನ್ನ ಜೈಲಿನೂಟದವರೆಗೂ ಕರೆದೊಯ್ದಿದೆ.
Discover more from Coastal Times Kannada
Subscribe to get the latest posts sent to your email.
Discussion about this post