ಮಂಗಳೂರು: ನಗರದ ಪಡೀಲ್ ಅಳಪೆ ಸಮೀಪದ ನಾಗುರಿ ಬಳಿಯ ಕಟ್ಟಡವೊಂದರಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ನ ‘ಒಕಿನಾವ’ ಶೋರೂಂನಲ್ಲಿ ಶುಕ್ರವಾರ ಬೆಳಿಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಶೋರೂಂನಲ್ಲಿದ್ದ ಹಲವು ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಶೋ ರೂಂನ ಮೇಲ್ಗಡೆ ಹಮೀದ್ ಎಂಬುವರ ಮನೆಯಿದ್ದು, ಹೊಗೆಯಾಡುತ್ತಿರುವುದನ್ನು ಕಂಡ ಮನೆ ಮಂದಿ ಕೆಳಗಿಳಿದು ಬಂದಾಗ ಶೋರೂಂನಲ್ಲಿದ್ದ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗುತ್ತಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.