• About us
  • Contact us
  • Disclaimer
Monday, May 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

Coastal Times by Coastal Times
May 25, 2026
in ಕರಾವಳಿ
ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.
25
VIEWS
WhatsappTelegramShare on FacebookShare on Twitter

ಮಂಗಳೂರು, ಮೇ 25:ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಂಗಳೂರಿಗೆ ಆಗಮಿಸಲಿರುವರು. ಇಲ್ಲಿನ ಅಮ್ಮನ ಭಕ್ತರ ಬಗ್ಗೆ ಅಮ್ಮನವರಿಗೆ ಅತ್ಯಂತ ಮಮತೆ. ಬಹುಶಃ ಅದೇ ಕಾರಣದಿಂದ ಈ ಬಾರಿ ಕೇರಳದಿಂದ ಹೊರಗಿನ ಏಕೈಕ ಸ್ಥಳ ಕರ್ನಾಟಕದಲ್ಲಿ ಮಂಗಳೂರು ಮಾತ್ರ ಆಯ್ಕೆಯಾಗಿರುವುದು ವಿಶೇಷ, ಅಲ್ಲದೆ 7 ವರ್ಷಗಳ ನಂತರ ಆಗಮಿಸುತ್ತಿರುವ “ಅಮ್ಮ”ನವರಿಗೆ ಭವ್ಯವಾದ ಸ್ವಾಗತ ನೀಡಲು ಅಮ್ಮನ ಭಕ್ತರು ಸಕಲ ಪೂರ್ವಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

25 ನೆಯ ವರ್ಷದ ಸಂಭ್ರಮಾಚರಣೆ ಎಂಬ ವಿಶೇಷತೆ ಹೊಂದಿರುವುದರಿಂದಲೂ ಅಮ್ಮನವರಿಗೆ ಪ್ರಿಯವಾದ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳಿಗೆ ಕೂಡಾ ಅಮ್ಮನವರಿಂದ ಚಾಲನೆ ದೊರಕಿಸುವಂತೆ ಪ್ರಯತ್ನಿಸಲಾಗುತ್ತದೆ.

ತಮ್ಮ ಪ್ರೇಮಸ್ವರೂಪದಲ್ಲಿ ಜಾತಿ ಮತ ಧರ್ಮ ವರ್ಣ ಭೇದವಿಲ್ಲದೆ ಎಲ್ಲರ ಭಾವನೆಗಳಿಗೆ ಸ್ಪಂದಿಸುತ್ತಾ ಅವರ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪದೊಂದಿಗೆ ಅನುಗ್ರಹಿಸುವ ಮೂಲಕ ಅಮ್ಮನವರು ವಿಶ್ವದಾದ್ಯಂತ ಜನರ ಆರಾಧ್ಯಮಾತೆಯಾಗಿದ್ದಾರೆ. ಆಧ್ಯಾತ್ಮಿಕ ಸಾಧಕರಿಗೆ ಸದ್ಗುರುವಾಗಿ ಮಾರ್ಗದರ್ಶನ ನೀಡುವ ಜೊತೆಗೆ ಸಾಮಾಜಿಕ ಮಾನವೀಯ ಸೇವಾಯೋಜನೆಗಳ ಮೂಲಕ ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಆದುದರಿಂದಲೇ ಅಮ್ಮನವರ ಕಾರ್ಯಕ್ರಮ ಹೆಚ್ಚು ಜನಾಕರ್ಷಣೆ ಪಡೆದಿದ್ದು ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಉತ್ಸುಕರಾಗಿದ್ದಾರೆ. ಅಮ್ಮನ ಭಕ್ತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ದಿನಗಳ ಕಾಲ ಬೆಳಗ್ಗಿನಿಂದ ರಾತ್ರಿಯ ತನಕವೂ ವೈವಿದ್ಯಮಯ ಕಾರ್ಯಕ್ರಮಗಳು ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ: ಮೇ 28 ಗುರುವಾರ ಅಮೃತಸಂಗಮ – ಯಜ್ಞಶಾಲೆಯಲ್ಲಿ

5.45 am – ಲಲಿತಾ ಸಹಸ್ರನಾಮ ಅರ್ಚನೆ

7.30 am – ರಾಹು ದೋಷ ನಿವಾರಣಾ ಪೂಜೆ

10.30 am – ಅಮ್ಮನ ಸತ್ಸಂಗ, ಭಜನೆ, ಧ್ಯಾನ

ವೈಯಕ್ತಿಕ ದರ್ಶನ – ಅಮೃತಾಲಿಂಗನ

ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮ:

5.30 am – ಮಹಾ ಗಣಪತಿ ಹೋಮ ನವಗ್ರಹ ಶಾಂತಿ ಹೋಮ

9.30 am – ಮಹಾ ಮೃತ್ಯುಂಜಯ ಹೋಮ

5.00 pm – ಮಹಾ ಸುದರ್ಶನ ಹೋಮ

6.00 pm – ಅಲಂಕಾರ ಪೂಜೆ

7.00 pm – ದೇವಿ ಪೂಜೆ (ಭಗವತಿ ಸೇವೆ)

🔳ಉದಯಾಸ್ತಮಾನ ಪೂಜೆ ಪ್ರಸಾದ ಸಂಜೆಯ ಆರತಿಯ ನಂತರ

ಮೇ 29, 2026 ಶುಕ್ರವಾರ;

ಅಮೃತಸಂಗಮ -ಯಜ್ಞಶಾಲೆಯಲ್ಲಿ

5.45 am – ಲಲಿತಾ ಸಹಸ್ರನಾಮ ಅರ್ಚನೆ

7.30 am – ಶನಿ ದೋಷ ನಿವಾರಣ ಪೂಜೆ

10.30 am – ಅಮ್ಮನ ಸತ್ಸಂಗ, ಭಜನೆ, ಧ್ಯಾನ

ವೈಯಕ್ತಿಕ ದರ್ಶನ-ಅಮೃತಾಲಿಂಗನ

ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ:

5.30 am – ಮಹಾ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ

9.30 am – ಮಹಾ ಧನ್ವಂತರಿ ಹೋಮ

5.00 pm – ಮಹಾ ಸುದರ್ಶನ ಹೋಮ

6.00 pm – ಅಲಂಕಾರ ಪೂಜೆ

7.00 pm – ದುರ್ಗಾ ಪೂಜೆ

🔳 ಉದಯಾಸ್ತಮಾನ ಪೂಜೆ ಪ್ರಸಾದ – ಸಂಜೆ ಆರತಿಯ ನಂತರ

ವಿಶೇಷ ಲೇಖನ ಯಜ್ಞ:
ಅಮ್ಮನವರ ಮಂಗಳೂರು ಭೇಟಿ ಮತ್ತು ಬ್ರಹ್ಮಸ್ಥಾನಂ ಮಹೋತ್ಸವದ ಪ್ರಯುಕ್ತ ” ಓಂ ಶಿವ ಶಕ್ತ್ಯೈಕ್ಯ ರೂಪಿಣ್ಯೈ ನಮಃ ” ಎಂಬ ಮಂತ್ರದ ಲೇಖನ ಯಜ್ಞದೊಂದಿಗೆ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಹಾಗೂ ಅಮ್ಮನವರಿಗೆ ಭಕ್ತಿಭಾವದ ಕೃತಜ್ಞತೆ ಅರ್ಪಿಸಲಾಗುತ್ತದೆ. ಈ ವಿಶೇಷ ಲೇಖನ ಯಜ್ಞಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದಿನಾಂಕ 28 ರಂದು ಬೆಳಗ್ಗೆ 10.30 ಕ್ಕೆ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳ ಅನಾವರಣ.

ಅಮ್ಮನವರ ದಿವ್ಯ ಉಪಸ್ಥಿತಿಯಲ್ಲಿ ಅಮೃತಸಂಗಮ 2026 ಸಭಾ ಕಾರ್ಯಕ್ರಮವು ಗಣ್ಯರ ಸಮಾಗಮದಲ್ಲಿ ಜರುಗಲಿರುವುದು. ಭಾರತ ಸರಕಾರದ ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀನ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ ಹಾಗೂ ಭಾರತ ಸರಕಾರದ ವಿದ್ಯುತ್ ಸಚಿವಾಲಯದ ರಾಜ್ಯ ಸಚಿವರು ಮತ್ತು ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಕರ್ನಾಟಕ ಸರಕಾರದ ವಿಧಾನ ಸಭಾ ಸಭಾಪತಿ ಶ್ರೀ ಯು. ಟಿ.ಖಾದರ್ ಫರೀದ್, ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬೃಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನ ಸಭಾ ಸದಸ್ಯ ಶ್ರೀ ಡಿ.ವೇದವ್ಯಾಸ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಕರ್ನಾಟಕ ಸರಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಿತೇಶ್ ಕುಮಾರ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿರುವರು.

ಗಣ್ಯರ ಉಪಸ್ಥಿತಿಯಲ್ಲಿ ಅಮ್ಮನವರ ಮಾನವೀಯ ಸೇವಾ ಉಪಕ್ರಮಗಳ ಅನಾವರಣ ಹಾಗೂ ವಿತರಣೆ ನಡೆಯಲಿರುವುದು.

🔳ಅಮ್ಮನ ದರ್ಶನ ಪಡೆಯುವ ವಿಧಾನ ಹೇಗೆ❓

🔳ಅಮ್ಮನ ದರ್ಶನಕ್ಕೆ ಯಾವುದೇ ಶುಲ್ಕವಿರುವುದಿಲ್ಲ,

🔳ಎಲ್ಲರಿಗೂ ಉಚಿತ ದರ್ಶನ:
ಅಮ್ಮನವರು ಭಕ್ತರ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪಮಾಡುವಾಗ ಯಜ್ಞ ಶಾಲೆಯಲ್ಲಿ ಆಸೀನರಾಗಿರುವುದು ಶ್ರೇಯಸ್ಕರ ಎಂಬುದು ಭಕ್ತರ ಅನುಭವದ ಮಾತಾಗಿದೆ.

🔳ದರ್ಶನ ಟೋಕನ್ ವ್ಯವಸ್ಥೆ: ಅಮ್ಮನವರ ದರ್ಶನವನ್ನು ಪಡೆಯಲು ಬಯಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಟೋಕನ್ ವ್ಯವಸ್ಥೆ ಇರುತ್ತದೆ. ಬೆಳಗ್ಗೆ 9.30 ರ ಒಳಗೆ ಬಂದು ಕುಳಿತವರಿಗೆ ಟೈಮ್ ಕಾರ್ಡ್ ನೀಡಲಾಗುತ್ತದೆ. ಜನರು ಬಂದ ಸಮಯಕ್ಕೆ ಅನುಗುಣವಾಗಿ ಟೈಮ್ ಕಾರ್ಡ್ ಸಂಖ್ಯೆಗಳಿದ್ದು ಅದಕ್ಕೆ ತಕ್ಕಂತೆ ಆನಂತರ ದರ್ಶನ ಟೋಕನ್ ನೀಡಲಾಗುತ್ತದೆ. ಅಮ್ಮನವರ ಸತ್ಸಂಗ, ಧ್ಯಾನ, ಭಜನೆಯ ನಂತರ ಅಮ್ಮನವರು ದರ್ಶನ ಟೋಕನ್ ನ ಸರದಿಯಂತೆ ಟೋಕನ್ ಹೊಂದಿರುವ ಪ್ರತಿಯೊಬ್ಬರಿಗೂ ಅಮ್ಮನವರು ಅಪ್ಪುಗೆಯ ಅಮೃತಾಲಿಂಗನದ ಅನುಗ್ರಹ ದರ್ಶನ ನೀಡಲಿರುವರು.

🔳ದರ್ಶನಕ್ಕೆ ಪುಟ್ಟ ಮಗುವಿಗೂ ಟೋಕನ್ ಪಡೆಯುವುದು ಅವಶ್ಯಕ

🔳ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ

ಅಮ್ಮನವರು ಮಾತೃವಾತ್ಸಲ್ಯದಿಂದ ಬಳಿಬರುವ ಎಲ್ಲಾ ಭಕ್ತರನ್ನು ತಮ್ಮ ಮಮತೆಯ ಮಡಿಲಲ್ಲಿ ಅಪ್ಪಿಕೊಂಡು ಅವರ ಸಂಕಷ್ಟಗಳ ನಿವಾರಣೆಗೆ ಸಂಕಲ್ಪ ಮಾಡಿ ಅನುಗ್ರಹಿಸುವ “ಅಮೃತಾಲಿಂಗನ”ದ ಮಹತ್ವ ಅರಿತ ಅಮ್ಮನ ಭಕ್ತರು ದೇಶ ವಿದೇಶಗಳಿಂದ ಬರುತ್ತಿದ್ದಾರೆ.

🔳ಪರವೂರಿನ ಭಕ್ತರಿಗೆ ವಸತಿ ಸೌಲಭ್ಯ: ವಿದೇಶೀ ಭಕ್ತರ ಸಹಿತ ಆಶ್ರಮವಾಸಿಗಳು, ಸೇವಾರ್ಥಿಗಳಿಗಾಗಿ ಮಂಚಿತವಾಗಿ ನೊಂದಣಿ ಮಾಡಿದವರಿಗೆ ಸಾಕಷ್ಟು ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

🔳ಮಹಾ ಅನ್ನ ಸಂತರ್ಪಣೆ: ದಿನಾಂಕ 28 ಮತ್ತು 29 ಮೇ 2026 ರಂದು ಎರಡು ದಿನಗಳ ಕಾಲ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಅದಕ್ಕೆ ವಿಶಾಲವಾದ ಅನ್ನಕ್ಷೇತ್ರ ಸಿದ್ಧಗೊಂಡಿದೆ.

🔳ಭಕ್ತರ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಜ್ಜಿಗೆ ಮತ್ತು ಬಿಸ್ಕೆಟ್ ಸೌಲಭ್ಯ ಕಲ್ಪಿಸಲಾಗುತ್ತದೆ.
🔳ಕಾರ್ಯಕ್ರಮದ ನಂತರ ಮತ್ತು ಅಮ್ಮನ ದರ್ಶನ ಪಡೆದ ನಂತರ ವಿವಿಧ ಸ್ಥಳಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಇರುತ್ತದೆ. ಕರ್ನಾಟಕ ರಸ್ತೆ ಸಾರಿಗೆಯವರ ಸೇವೆಯೂ ಲಭ್ಯವಿರುತ್ತದೆ.

ಅಮ್ಮನವರ ಈ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಎಲ್ಲರಿಗೆ ತಲಪಿಸುವ ಮೂಲಕ ಏಳು ವರ್ಷದ ನಂತರ ನಡೆಯುವ ಮತ್ತು ಕರ್ನಾಟಕದ ಏಕೈಕ ಕಾರ್ಯಕ್ರಮವಾಗಿರುವ ಕಾರಣ ರಾಜ್ಯದಾದ್ಯಂತ ಜನರು ಆಸಕ್ತರಾಗಿದ್ದು ಅವರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಲ್ಲಿ ಮಾಧ್ಯಮದ ಸಹಕಾರ ಅಗತ್ಯವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರು: ಸುರೇಶ್ ಅಮೀನ್ ಅಧ್ಯಕ್ಷರು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಮಂಗಳೂರು ಹಾಗೂ ಆಯೋಜನಾ ಸಮಿತಿ ಅಮೃತ ಸಂಗಮ 2026, ಡಾ ಜೀವರಾಜ್ ಸೊರಕೆ ಗೌರವಾಧ್ಯಕ್ಷರು ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಸಿ ಎ ವಾಮನ್ ಕಾಮತ್ ಗೌರವಾಧ್ಯಕ್ಷರು ಮಾತಾ ಅಮೃತಾನಂದಮಯಿ ಸೇವಾ ಸಮಿತಿ , ಡಾ. ವಸಂತಕುಮಾರ ಪೆರ್ಲ ಗೌರವಾಧ್ಯಕ್ಷರು ಮಾತಾ ಅಮೃತಾನಂದಮಯಿ ಸೇವಾ ಸಮಿತಿ, C A ರಾಮನಾಥ್ ಕಾರ್ಯದರ್ಶಿ ಅಮೃತಸಂಗಮ ಆಯೋಜನಾ ಸಮಿತಿ ಡಾ.ದೇವದಾಸ್ ಪುತ್ರನ್ ವೈದ್ಯಕೀಯ ಪ್ರಕೋಷ್ಠ ಮಾತಾ ಅಮೃತಾನಂದಮಯಿ ಸೇವಾ ಸಮಿತಿ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related


Discover more from Coastal Times Kannada

Subscribe to get the latest posts sent to your email.

Previous Post

ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

Related Posts

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ
ಕರಾವಳಿ

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

May 23, 2026
72
ಮಂಗಳೂರಿನಲ್ಲಿ ಏಕಕಾಲಕ್ಕೆ ಮೇ 23ರಂದು ನಾಲ್ಕು ಅದ್ದೂರಿ ಸಭಾಭವನಗಳ ಲೋಕಾರ್ಪಣೆ: ಕೃಷ್ಣ ಪಾಲೆಮಾರ್
ಕರಾವಳಿ

ಮಂಗಳೂರಿನಲ್ಲಿ ಏಕಕಾಲಕ್ಕೆ ಮೇ 23ರಂದು ನಾಲ್ಕು ಅದ್ದೂರಿ ಸಭಾಭವನಗಳ ಲೋಕಾರ್ಪಣೆ: ಕೃಷ್ಣ ಪಾಲೆಮಾರ್

May 21, 2026
66

Discussion about this post

Recent News

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
25
ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

May 25, 2026
43
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

May 25, 2026
ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

May 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d