ಮಂಗಳೂರು ಆಗಸ್ಟ್ 27, 2026: Cavolin ಒಂದು ಪ್ರೀಮಿಯಂ ಲೈಫ್‌ಸ್ಟೈಲ್ ಐವೇರ್ ಬ್ರಾಂಡ್ ಆಗಿದ್ದು, ಪ್ರಸಿದ್ಧ ಅಂತರರಾಷ್ಟ್ರೀಯ ಲಕ್ಸುರಿ ಫ್ಯಾಷನ್ ಬ್ರಾಂಡ್‌ಗಳನ್ನು ತನ್ನದೇ ವಿಶಿಷ್ಟ ವಿನ್ಯಾಸದ ಹೊಸ ಕಲೆಕ್ಷನ್‌ಂದೊಂದಿಗೆ ಸಂಯೋಜಿಸಿ ಸಂಪೂರ್ಣ ಪ್ರೀಮಿಯಂ ಐವೇರ್ ಅನುಭವವನ್ನು ಒದಗಿಸುತ್ತದೆ. ಇದೀಗ Cavolin ತನ್ನ ದೃಷ್ಟಿ ಆರೈಕೆ ಸೇವೆಗಳನ್ನು ವಿಸ್ತರಿಸಿದ್ದು, ಮಂಗಳೂರಿನ ಮೊದಲ ZEISS VISION CENTER ಅನ್ನು ಆರಂಭಿಸಿದೆ.
ZEISS India ಸಹಭಾಗಿತ್ವದಲ್ಲಿ ಆರಂಭಗೊಂಡಿರುವ ಈ ಹೊಸ ಕೇಂದ್ರವು Cavolinನ ಪ್ರೀಮಿಯಂ ಐವೇರ್ ಪರಿಣಿತಿಯನ್ನು ZEISSನ ನಿಖರ ಆಪ್ಟಿಕ್ಸ್ ಮತ್ತು ದೃಷ್ಟಿ ಆರೈಕೆ ಪರಿಹಾರಗಳೊಂದಿಗೆ ಸಂಯೋಜಿಸುತ್ತದೆ. ಇದರ ಮೂಲಕ ಈ ಭಾಗದ ಗ್ರಾಹಕರಿಗೆ ಹೆಚ್ಚು ಸಮಗ್ರ ಮತ್ತು ವೈಯಕ್ತಿಕಗೊಳಿಸಿದ ದೃಷ್ಟಿ ಆರೈಕೆ ಅನುಭವ ದೊರೆಯಲಿದೆ. ಇದು Cavolinನ ಮೊದಲ ZEISS VISION CENTER ಆಗಿದ್ದು, ಕರಾವಳಿ ಕರ್ನಾಟಕದ ಗ್ರಾಹಕರಿಗೆ ಪ್ರೀಮಿಯಂ ದೃಷ್ಟಿ ಆರೈಕೆಯನ್ನು ಇನ್ನಷ್ಟು ಹತ್ತಿರಕ್ಕೆ ತರುವ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಮಂಗಳೂರಿನ ಫಿಜಾ ಬೈ ನೆಕ್ಸಸ್ ಮಾಲ್, ಮಂಗಳಾದೇವಿ ರಸ್ತೆ, ಪಾಂಡೇಶ್ವರ, FF-107, ಮೊದಲ ಮಹಡಿಯಲ್ಲಿ ಸ್ಥಾಪಿತವಾಗಿರುವ ಈ ಕೇಂದ್ರವು 1,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಗ್ರಾಹಕರಿಗೆ ಸುಗಮ ಮತ್ತು ಉನ್ನತ ಮಟ್ಟದ ದೃಷ್ಟಿ ಆರೈಕೆ ಅನುಭವವನ್ನು ಒದಗಿಸುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. ZEISS VISION CENTER ಪರಿಕಲ್ಪನೆಯು ವೈಯಕ್ತಿಕ ಸಮಾಲೋಚನೆ, ಸುಧಾರಿತ ZEISS ತಂತ್ರಜ್ಞಾನ ಮತ್ತು ಪ್ರೀಮಿಯಂ ದೃಷ್ಟಿ ಪರಿಹಾರಗಳನ್ನು ಸಂಯೋಜಿಸಿ, ಪ್ರತಿಯೊಬ್ಬ ಗ್ರಾಹಕರ ದೃಷ್ಟಿ ಅಗತ್ಯಗಳು ಮತ್ತು ಜೀವನಶೈಲಿಗೆ ಅನುಗುಣವಾದ ಸೇವೆಯನ್ನು ಒದಗಿಸುತ್ತದೆ. ಜಾಗತಿಕವಾಗಿ ZEISS VISION CENTER ಕೇಂದ್ರಗಳು ನಿಖರ ದೃಷ್ಟಿ ವಿಶ್ಲೇಷಣೆ, ಪರಿಣಿತ ಸಮಾಲೋಚನೆ ಮತ್ತು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾದ ZEISS ಲೆನ್ಸ್ ಪರಿಹಾರಗಳ ಮೇಲೆ ಕೇಂದ್ರೀಕರಿಸಿವೆ.


ಈ ಕುರಿತು ಮಾತನಾಡಿದ ನಿಖಿಲ್ ನಂದೀಶ, ಮ್ಯಾನೇಜಿಂಗ್ ಡೈರೆಕ್ಟರ್, ಕ್ಯಾವೊಲಿನ್ ಅವರು, “ಕರ್ನಾಟಕದಲ್ಲಿರುವ ನಮ್ಮ ವಿವಿಧ ಆಪ್ಟಿಕಲ್ ಕೇಂದ್ರಗಳಲ್ಲಿ, ZEISS ಬಹುಕಾಲದಿಂದಲೂ ಪ್ರಮುಖ ತಂತ್ರಜ್ಞಾನ ಮತ್ತು ನಿಖರತೆಯ ಪಾಲುದಾರನಾಗಿ ನಮ್ಮೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಅವರ ಗುಣಮಟ್ಟ ಮತ್ತು ದೃಷ್ಟಿ ಆರೈಕೆ ಪರಿಹಾರಗಳ ಮೇಲೆ ನಮಗೆ ಅಪಾರ ವಿಶ್ವಾಸವಿದೆ. ಜಾಗತಿಕ ZEISS VISION CENTER ಪರಿಕಲ್ಪನೆಯನ್ನು ಮಂಗಳೂರಿಗೆ ತರುವ ಮೂಲಕ ಈ ಉನ್ನತ ಮಟ್ಟದ ಸೇವೆಯನ್ನು ಕರಾವಳಿ ಕರ್ನಾಟಕಕ್ಕೂ ವಿಸ್ತರಿಸಲು ನಮಗೆ ಸಾಧ್ಯವಾಗಿದೆ. ಇದರಿಂದ Cavolinನ ಲಕ್ಸುರಿ ಬ್ರಾಂಡ್ ಸ್ಥಾನ ಮತ್ತಷ್ಟು ಬಲಗೊಳ್ಳುವುದರ ಜೊತೆಗೆ, ಸ್ಥಳೀಯ ಗ್ರಾಹಕರಿಗೆ ಅತ್ಯಾಧುನಿಕ ರೋಗನಿರ್ಣಯ ತಂತ್ರಜ್ಞಾನ, ಪ್ರಮುಖ ಅಂತರರಾಷ್ಟ್ರೀಯ ಐವೇರ್ ಬ್ರಾಂಡ್‌ಗಳ ವ್ಯಾಪಕ ಶ್ರೇಣಿ ಮತ್ತು ವೈಯಕ್ತಿಕಗೊಳಿಸಿದ ಆಪ್ಟಿಕಲ್ ಆರೈಕೆಗೆ ನೇರ ಪ್ರವೇಶ ದೊರೆಯಲಿದೆ” ಎಂದು ಹೇಳಿದರು.

ರೋಹನ್ ಪಾಲ್, ಬಿಸಿನೆಸ್ ಹೆಡ್ – ಇಂಡಿಯಾ ಅಂಡ್ ನೈಬರಿಂಗ್ ಮಾರ್ಕೆಟ್ಸ್, ವಿಷನ್ ಕೇರ್, ಝೈಸ್ ಇಂಡಿಯಾ ಅವರು, “ತಂತ್ರಜ್ಞಾನದ ನಿಖರತೆ ಮತ್ತು ವೈಯಕ್ತಿಕಗೊಳಿಸಿದ ಗ್ರಾಹಕ ಅನುಭವಕ್ಕೆ ಸಮಾನ ಆದ್ಯತೆ ನೀಡುವ ಪಾಲುದಾರ ಸಂಸ್ಥೆಯೊಂದಿಗೆ ಕೈಜೋಡಿಸುವ ಮೂಲಕ ಉತ್ತಮ ಗುಣಮಟ್ಟದ ದೃಷ್ಟಿ ಆರೈಕೆಯ ಲಭ್ಯತೆಯನ್ನು ವಿಸ್ತರಿಸಲು ZEISS India ಬದ್ಧವಾಗಿದೆ. Cavolin ಜೊತೆಗೂಡಿ ಮಂಗಳೂರಿನಲ್ಲಿ ಮೊದಲ ಬಾರಿಗೆ ZEISS VISION CENTER ಅನುಭವವನ್ನು ಪರಿಚಯಿಸಲು ನಮಗೆ ಸಂತೋಷವಾಗಿದೆ. ಇದರ ಮೂಲಕ ಕರಾವಳಿ ಕರ್ನಾಟಕದ ಗ್ರಾಹಕರಿಗೆ ಸುಧಾರಿತ ZEISS ತಂತ್ರಜ್ಞಾನಗಳು, ಪ್ರೀಮಿಯಂ ದೃಷ್ಟಿ ಪರಿಹಾರಗಳು ಮತ್ತು ವೈಯಕ್ತಿಕ ಸಮಾಲೋಚನೆ ಲಭ್ಯವಾಗಲಿದೆ. ಈ ಆರಂಭವು ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ನಮ್ಮ ಉಪಸ್ಥಿತಿಯನ್ನು ಬಲಪಡಿಸುವುದರ ಜೊತೆಗೆ, ನಮ್ಮ ಪಾಲುದಾರರೊಂದಿಗೆ ಇನ್ನಷ್ಟು ಸಮಗ್ರ ಮತ್ತು ಗ್ರಾಹಕಕೇಂದ್ರಿತ ದೃಷ್ಟಿ ಆರೈಕೆ ಅನುಭವವನ್ನು ರೂಪಿಸುವ ನಮ್ಮ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ZEISS VISION CENTER by CAVOLIN ನಲ್ಲಿ, ZEISS ಲೆನ್ಸ್‌ಗಳ ವ್ಯಾಪಕ ಶ್ರೇಣಿಯೊಂದಿಗೆ Cavolin ಆಯ್ಕೆ ಮಾಡಿರುವ ಪ್ರೀಮಿಯಂ ಐವೇರ್‌ಗಳ ಸಂಗ್ರಹವನ್ನು ಒಟ್ಟುಗೂಡಿಸಲಾಗಿದೆ. ಇದರ ಮೂಲಕ ಸಮಗ್ರ ದೃಷ್ಟಿ ಆರೈಕೆಯನ್ನು ಬಯಸುವ ಮಂಗಳೂರಿನ ಗ್ರಾಹಕರಿಗೆ ವಿಶಿಷ್ಟ ಅನುಭವ ದೊರೆಯಲಿದೆ.
ತಾಂತ್ರಿಕ ನವೀನತೆ ಮತ್ತು ವೈಯಕ್ತಿಕ ಸಮಾಲೋಚನೆಯನ್ನು ಸಂಯೋಜಿಸುವ ರೀತಿಯಲ್ಲಿ ಈ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರ ದೃಷ್ಟಿ ಅಗತ್ಯಗಳು, ದೈನಂದಿನ ಚಟುವಟಿಕೆಗಳು ಮತ್ತು ಜೀವನಶೈಲಿಗೆ ಸೂಕ್ತವಾದ ದೃಷ್ಟಿ ಪರಿಹಾರಗಳನ್ನು ಆಯ್ಕೆ ಮಾಡಲು ಇದು ನೆರವಾಗಲಿದೆ. ಕೇಂದ್ರಕ್ಕೆ ಭೇಟಿ ನೀಡುವ ಗ್ರಾಹಕರಿಗೆ ವಿವಿಧ ದೃಷ್ಟಿ ಅಗತ್ಯಗಳು ಮತ್ತು ಜೀವನಶೈಲಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾದ ಲೆನ್ಸ್ ವಿನ್ಯಾಸಗಳು ಮತ್ತು ತಂತ್ರಜ್ಞಾನಗಳನ್ನು ಒಳಗೊಂಡ ZEISSನ ಪ್ರೀಮಿಯಂ ದೃಷ್ಟಿ ಪರಿಹಾರಗಳ ವ್ಯಾಪಕ ಶ್ರೇಣಿ ಲಭ್ಯವಾಗಲಿದೆ.
ಈ ಆರಂಭವು ಕರ್ನಾಟಕದಲ್ಲಿ Cavolinನ ಉಪಸ್ಥಿತಿಯನ್ನು ಮತ್ತೊಮ್ಮೆ ಬಲಪಡಿಸುತ್ತದೆ. ಹೊಸ ZEISS VISION CENTER ಮೂಲಕ ಕರಾವಳಿ ಕರ್ನಾಟಕಕ್ಕೂ ಈ ಅನುಭವವನ್ನು ವಿಸ್ತರಿಸಲಾಗಿದ್ದು, Cavolinನ ಪ್ರೀಮಿಯಂ ಐವೇರ್ ಪರಿಣಿತಿಯನ್ನು ZEISSನ ನಿಖರ ಆಪ್ಟಿಕ್ಸ್ ಮತ್ತು ವೈಯಕ್ತಿಕಗೊಳಿಸಿದ ದೃಷ್ಟಿ ಆರೈಕೆ ಪರಿಣಿತಿಯೊಂದಿಗೆ ಸಂಯೋಜಿಸಲಾಗಿದೆ.
ZEISS VISION CENTER by CAVOLIN ಇದೀಗ ಫಿಜಾ ಬೈ ನೆಕ್ಸಸ್ ಮಾಲ್, ಮಂಗಳೂರಿನಲ್ಲಿ ಗ್ರಾಹಕರಿಗಾಗಿ ತೆರೆದಿದ್ದು, ವೈಯಕ್ತಿಕಗೊಳಿಸಿದ ಕಣ್ಣಿನ ಆರೈಕೆ, ಪ್ರೀಮಿಯಂ ZEISS ಲೆನ್ಸ್ ಪರಿಹಾರಗಳು ಮತ್ತು ಪರಿಣಿತ ಸಮಾಲೋಚನೆಯನ್ನು ಒದಗಿಸುತ್ತಿದೆ.
Discover more from Coastal Times Kannada
Subscribe to get the latest posts sent to your email.







Discussion about this post