ಬೆಳ್ತಂಗಡಿ: ವೇಣೂರು ಸಮೀಪದ ಬರ್ಕಜೆ ಡ್ಯಾಂ ಬಳಿ ನದಿಗೆ ಸ್ನಾನಕ್ಕೆ ತೆರಳಿದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ತಾಲೂಕಿನ ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಕಾರ್ಯಕ್ರಮದ ಹಿನ್ನೆಲೆ ಬಂದಿದ್ದ ಮೂಡುಬಿದಿರೆ ತಾಲೂಕಿನ ಎಡಪದವು ನಿವಾಸಿ ಲಾರೆನ್ಸ್(20), ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್(19), ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ಎಂಬವರು ನ.27 ರಂದು ಊಟ ಮೂಗಿಸಿ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದರು.
ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೂವರ ಮೃತದೇಹವನ್ನೂ ನೀರಿನಿಂದ ಹೊರ ತೆಗೆಯಲಾಗಿದ್ದು. ಮೃತಪಟ್ಟ ಮೂವರು ಮಂಗಳೂರು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post