• About us
  • Contact us
  • Disclaimer
Tuesday, September 29, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

Coastal Times by Coastal Times
September 29, 2026
in ಕರಾವಳಿ
ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್
0
VIEWS
WhatsappTelegramShare on FacebookShare on Twitter

ಮಂಗಳೂರು, ಸೆ.28: ದಸರಾ ಹಬ್ಬಕ್ಕೆ ಈಗಾಗಲೇ ಸರ್ಕಾರ ರಜೆ ಘೋಷಿಸಿದ್ದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಕಡ್ಡಾಯ ಪಾಲನೆ ಮಾಡಬೇಕು. ಆದರೆ ದಸರಾ ರಜೆಯನ್ನು ಸರ್ಕಾರದ ಅನುದಾನ ಪಡೆಯುವ ಕ್ರಿಶ್ಚಿಯನ್ ಕಾನ್ವೆಂಟ್ ಸ್ಕೂಲ್ ಗಳು ಪಾಲಿಸುತ್ತಿಲ್ಲ. ಅಂತಹ ಶಾಲೆಗಳ ಎದುರಲ್ಲಿ ಈ ಬಾರಿ ಶ್ರೀರಾಮ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹಿಂದುಗಳ ದಸರಾ ಹಬ್ಬಕ್ಕಾಗಿ ಒಂದು ತಿಂಗಳ ಸರ್ಕಾರಿ ರಜೆ ಇದೆ, ಆದರೆ ಇದೇ ದಸರಾ ಸಂದರ್ಭದಲ್ಲಿ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳಲ್ಲಿ ಪರೀಕ್ಷೆ, ಪಾಠ ಪ್ರವಚನ ಮಾಡಿಸುತ್ತಾರೆ.  ಈ ಅವಧಿಗೆ ನೀಡಲಾಗುವ ರಜೆಯನ್ನು ಕ್ರಿಸ್ಮಸ್ ವೇಳೆಗೆ ಕೊಡುತ್ತಾರೆ. ಇದರಿಂದ ಅಲ್ಲಿ ಕಲಿಯುವ ಶಾಲಾ ಮಕ್ಕಳಿಗೆ, ಅಲ್ಲಿ ಕೆಲಸ ಮಾಡುವ ಸಿಬಂದಿಗೆ ಹಬ್ಬ ಆಚರಿಸಲು ಅಥವಾ ದಸರಾಕ್ಕೆ ಹೊರಗೆ ಹೋಗಲು ಆಗುತ್ತಿಲ್ಲ. ಇದರ ಬಗ್ಗೆ ಹಲವು ಪೋಷಕರು ನಮ್ಮಲ್ಲಿ ನೋವು ಹೇಳಿಕೊಂಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಎಲ್ಲ ಕ್ರಿಶ್ಚಿಯನ್ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರು 99 ಪರ್ಸೆಂಟ್ ಹಿಂದುಗಳೇ ಇದ್ದಾರೆ. ಆದರೆ ದಸರಾ ಸಂದರ್ಭದಲ್ಲಿ ಈ ಶಾಲೆಗಳಲ್ಲಿ ಪರೀಕ್ಷೆ ಇಟ್ಟರೆ ಹಬ್ಬ ಆಚರಣೆ ಮಾಡಕ್ಕಾಗಲ್ಲ. ಇದರಿಂದ ಆ ಮಕ್ಕಳಿಗೆ ದ್ರೋಹ ಬಗೆದಂತೆ. ಈ ಬಾರಿಯೂ ಇದೇ ನೀತಿ ಮುಂದುವರಿದರೆ ಶಾಲೆಗಳ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಮುತಾಲಿಕ್ ಹೇಳಿದರು.

ಡಿ.25ರ ಒಂದು ದಿನ ರಜೆ ಇರುವುದನ್ನು ಕ್ರಿಸ್ತಿಯನ್ ಶಾಲೆಗಳು ಹತ್ತು ದಿನ ರಜೆ ಕೊಟ್ಟು ಸಾಂಸ್ಕೃತಿಕ ಮತಾಂತರ ಮಾಡುವ ಯತ್ನ ಮಾಡುತ್ತಿದ್ದಾರೆ. ಸರ್ಕಾರದ ಅನುದಾನ ಪಡೆಯುವ ಶಾಲೆಗಳು ಸರ್ಕಾರದ ನೀತಿಯನ್ನು ಕಡ್ಡಾಯ ಪಾಲಿಸಬೇಕು ಎಂದರು. ಅಲ್ಲಿ ಮೊದಲೇ ರಜೆ ಮತ್ತು ಇತರ ನೀತಿಗಳ ಬಗ್ಗೆ ಗೊತ್ತಿರುತ್ತದೆ, ವಿರೋಧ ಇರೋರು ಯಾಕೆ ಮಕ್ಕಳನ್ನು ಕಳಿಸಬೇಕು ಎಂದು ಕೇಳಿದ ಪ್ರಶ್ನೆಗೆ, ನಾವು ಹಿಂದು ವಿರೋಧಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂದು ಅಭಿಯಾನ ಮಾಡುತ್ತೇವೆ ಎಂದರು.

ಮುಂದಿನ ದಿನಗಳಲ್ಲಿ ರಾಮ ಸೇನೆ ಮತ್ತು ಶ್ರೀರಾಮ ಸೇನೆ ಪ್ರತ್ಯೇಕ ಇರುವುದಿಲ್ಲ. ನಾವು ಸಂಘಟನೆಯ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುತ್ತೇವೆ. ಇದರ ಬಗ್ಗೆ ಪ್ರಸಾದ್ ಅತ್ತಾವರ ಜೊತೆಗೆ ಮಾತುಕತೆ ಮಾಡಿದ್ದೇವೆ. ಅನಾರೋಗ್ಯದಲ್ಲಿರುವ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಸಂಘಟನೆ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

Related Posts

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!
ಕರಾವಳಿ

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

September 28, 2026
98
ಇಂದಿನಿಂದ ನಡೆಯಬೇಕಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ; ಗ್ರಾಹಕರು ನಿರಾಳ
ಕರಾವಳಿ

ಇಂದಿನಿಂದ ನಡೆಯಬೇಕಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ; ಗ್ರಾಹಕರು ನಿರಾಳ

September 28, 2026
39

Discussion about this post

Recent News

ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

September 29, 2026
0
ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

September 28, 2026
98
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

ಕಾನ್ವೆಂಟ್ ಸ್ಕೂಲ್ ಗಳಲ್ಲಿ ದಸರಾಗೆ ರಜೆ ಯಾಕಿಲ್ಲ, ರಜೆ ಕಡಿತ ಮಾಡಿದರೆ ಪ್ರತಿಭಟನೆ ; ಪ್ರಮೋದ್ ಮುತಾಲಿಕ್

September 29, 2026
ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ;25 ಲಕ್ಷ ರೂ. ಸುಪಾರಿ, ಪತ್ನಿಯ ಹೆರಿಗೆ ಬಳಿಕ ಬದಲಾದ ದೂರುದಾರನ ಮನಸ್ಸು!

September 28, 2026
ಮಂಗಳೂರು : CCB ಪೋಲೀಸರ ಭರ್ಜರಿ ಕಾರ್ಯಾಚರಣೆ : ರೂ.24 ಲಕ್ಷದ MDMA ವಶ, ಮೂವರು ಅರೆಸ್ಟ್

ಮಂಗಳೂರು : CCB ಪೋಲೀಸರ ಭರ್ಜರಿ ಕಾರ್ಯಾಚರಣೆ : ರೂ.24 ಲಕ್ಷದ MDMA ವಶ, ಮೂವರು ಅರೆಸ್ಟ್

September 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d