• About us
  • Contact us
  • Disclaimer
Thursday, July 2, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸುರತ್ಕಲ್ ಫಾಜಿಲ್​ ಕೊಲೆ ಪ್ರಕರಣ: ಕಾರು ಮಾಲೀಕ ಸೇರಿ ಏಳು ಮಂದಿ ಬಂಧನ

Coastal Times by Coastal Times
August 2, 2022
in ಕ್ರೈಮ್ ನ್ಯೂಸ್
ಸುರತ್ಕಲ್ ಫಾಜಿಲ್​ ಕೊಲೆ ಪ್ರಕರಣ: ಕಾರು ಮಾಲೀಕ ಸೇರಿ ಏಳು ಮಂದಿ ಬಂಧನ
273
VIEWS
WhatsappTelegramShare on FacebookShare on Twitter

ಮಂಗಳೂರು: ಸುರತ್ಕಲ್​ನಲ್ಲಿ ಫಾಜಿಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಕಾರು ಮಾಲೀಕ ಸೇರಿ 7 ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಬಜ್ಪೆಯ ಸುಹಾಸ್ ಶೆಟ್ಟಿ (29), ಕುಳಾಯಿಯ ಮೋಹನ್ ಸಿಂಗ್ ಅಲಿಯಾಸ್​ ನೇಪಾಲಿ ಮೋಹನ್ (26), ಗಿರಿಧರ್ (23), ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್ (21), ಶ್ರೀನಿವಾಸ್ (23), ದೀಕ್ಷಿತ್ (21) ಎಂದು ಗುರುತಿಸಲಾಗಿದೆ.

ಜುಲೈ 28 ರಂದು ಸುರತ್ಕಲ್​ನಲ್ಲಿ ಫಾಜಿಲ್​ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರದಂದು ಹತ್ಯೆಗೆ ಆರೋಪಿಗಳಿಗೆ ಕಾರು ನೀಡಿದ್ದ ಅಜಿತ್ ಕ್ರಾಸ್ತಾನನ್ನು ಪೊಲೀಸರ ಬಂಧಿಸಿದ್ದರು. ಇದೀಗ ಮತ್ತೆ ಆರು ಆರೋಪಿಗಳನ್ನು ಸಿಸಿಬಿ ಪೊಲೀಸರು ಇಂದು ನಸುಕಿನ ಜಾವ ಬಂಧಿಸಿದ್ದಾರೆ. ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಜುಲೈ 26 ರಂದು ರಾತ್ರಿ ಆರೋಪಿ ಸುಹಾಸ್ ಶೆಟ್ಟಿ ಮತ್ತು ಅಭಿಷೇಕ್ ಯಾರನ್ನಾದರೂ ಕೊಲೆ ಮಾಡಬೇಕು ಎಂದು ದೂರವಾಣಿಯಲ್ಲಿ ಚರ್ಚಿಸಿದ್ದರು‌. ಮರುದಿನ ( ಜು.27 ) ಹೋಟೆಲ್​ನಲ್ಲಿ ಮತ್ತೆ ಚರ್ಚೆ ಈ ಕೊಲೆ ಬಗ್ಗೆ ನಡೆಸಿದ್ದರು. ಆಗ ಅವರಿಗೆ ಅಲ್ಲಿ ನೇಪಾಲಿ ಮೋಹನ್ ಭೇಟಿಯಾಗಿದ್ದಾನೆ. ಅವರಿಗೆ ತನ್ನ ಗೆಳೆಯರಾದ ಶ್ರೀನಿವಾಸ , ದೀಕ್ಷಿತ್, ಗಿರಿಧರನನ್ನು ಈ ಕೃತ್ಯದಲ್ಲಿ ಸೇರಿಸುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸ್​ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಹೋಟೆಲ್​ನಲ್ಲಿ ಚರ್ಚೆ ಮಾಡುತ್ತಿರುವ ಸಂದರ್ಭದಲ್ಲಿ ಯಾರನ್ನಾದರೂ ಕೊಲೆ ಮಾಡಬೇಕು ಎಂದು ಆರು ಜನರ ಹೆಸರನ್ನು ಪ್ರಸ್ತಾಪಿಸುತ್ತಾರೆ. ಆದರೆ, ಆ ವೇಳೆ ಯಾವುದೂ ಫೈನಲ್ ಆಗಿರಲಿಲ್ಲ. ಇದರ ಮಧ್ಯೆ ಮೋಹನ್ ಮತ್ತು ಗಿರಿಧರ್ ಕೃತ್ಯ ನಡೆಸಲು ಅಜಿತ್ ಕ್ರಾಸ್ತಾನಿಂದ ಕಾರು ತರುತ್ತಾರೆ. ಒಂದು ಬಹುದೊಡ್ಡ ಕೆಲಸವಿದೆ.

ಅದರಲ್ಲಿ ಯಶಸ್ಸು ಆದರೆ 3 ದಿನಕ್ಕೆ 15 ಸಾವಿರ ನೀಡುತ್ತೇವೆ ಎಂದು ಅಜಿತ್ ಕ್ರಾಸ್ತಾಗೆ ಆಮಿಷವೊಡ್ಡುತ್ತಾರೆ. ಅಷ್ಟೇ ಅಲ್ಲ ಆಗ ಅಜಿತ್ ಕ್ರಾಸ್ತಾಗೆ ಕಾರಿನ ಗುರುತು ಸಿಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಕಾರು ತಂದರೂ ಸಹ ಆ ದಿನ ಕೊಲೆ ಮಾಡಲು ಪ್ಲ್ಯಾನ್ ಆಗಿರಲಿಲ್ಲ. ಅವತ್ತು ಸುರತ್ಕಲ್​ನಲ್ಲಿ ಸುಹಾಸ್ ಶೆಟ್ಟಿ, ಗಿರಿಧರ್, ಮೋಹನ್ ಹೊರತು ಪಡಿಸಿ ಉಳಿದವರು ಸಂಜೆಯಾದ್ರೂ ಸೇರಿರಲಿಲ್ಲ. ಜುಲೈ 28 ರಂದು ಸುಹಾಸ್ ಶೆಟ್ಟಿ ಕಾರಿನಲ್ಲಿ ಮಾರಕಾಸ್ತ್ರಗಳನ್ನಿಟ್ಟು ಸ್ನೇಹಿತರ ಜೊತೆಗೆ ಕಾರಿಂಜೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ಬಂದ ಸುಹಾಸ್​ ಶೆಟ್ಟಿ ಕೇಸ್​ವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಬಳಿಕ ಮತ್ತೆ ಯಾರನ್ನು ಕೊಲೆ ಮಾಡುವುದು ಎಂದು ಚರ್ಚೆ ಮಾಡಿದ್ದರು. ಆಗ ಚರ್ಚೆಯಲ್ಲಿ ಫಾಜಿಲ್‌ ಮೊಹಮ್ಮದ್​ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಬಳಿಕ ಮಂಕಿಕ್ಯಾಪ್ ಖರೀದಿಸಿ ಕಿನ್ನಿಗೋಳಿ ಬಾರ್​ನಲ್ಲಿ ಊಟ ಮಾಡಿ ಮತ್ತಿಬ್ಬರು ಆರೋಪಿಗಳು ಅವರ ಜೊತೆಗೂಡಿ ಫಾಜಿಲ್ ಹತ್ಯೆ ಮಾಡಲು ಜಾಗ ನಿರ್ಧರಿಸಿದ್ದರು‌. ಫಾಜಿಲ್ ಇರುವುದನ್ನು ಗುರುತಿಸಿ ಕಾರಿನಿಂದಿಳಿದ ಸುಹಾಸ್, ಮೋಹನ್, ಅಭಿಷೇಕ್ ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ. ಗಿರಿಧರ್ ಡ್ರೈವಿಂಗ್ ಮಾಡುತ್ತಿದ್ದರೆ, ದೀಕ್ಷಿತ್ ವಾಹನದಲ್ಲಿ ಕುಳಿತಿದ್ದರು. ಶ್ರೀನಿವಾಸ ಹಲ್ಲೆ ನಡೆಸಿದಾಗ ಯಾರಾದರೂ ತಡೆಯುತ್ತಾರೋ ಎಂದು ಪರಿಶೀಲಿಸುತ್ತಿದ್ದ.

ಘಟನೆ ನಡೆದ ಬಳಿಕ ಅವರು ಫಲಿಮಾರ್ ಮಾರ್ಗವಾಗಿ ತೆರಳಿ ಇನ್ನಾ ಎಂಬಲ್ಲಿ ಕಾರು ಬಿಟ್ಟು ಅಲ್ಲಿಂದ ಬೇರೆ ಕಾರು ತರಿಸಿ ಪರಾರಿಯಾಗಿದ್ದರು. ಇವತ್ತು ಬೆಳಗಿನ ಜಾವ 2-3 ಗಂಟೆಗೆ ಸಿಸಿಬಿ ಪೊಲೀಸರ ತಂಡ ಆರು ಜನರನ್ನು ಬಂಧಿಸಿತ್ತು ಎಂದು ನಗರ ಪೊಲೀಸ್​ ಆಯುಕ್ತ ಶಶಿಕುಮಾರ್​ ಮಾಧ್ಯಮಕ್ಕೆ ಹೇಳಿದ್ದಾರೆ. ಈ ಸಂಬಂಧ ನಿನ್ನೆ ಮಾಹಿತಿ ನೀಡಿದ್ದ ಮಂಗಳೂರು ಪೊಲೀಸ್​​ ಆಯುಕ್ತರು, ಪ್ರಕರಣಕ್ಕೆ ಸಂಬಂಧಿಸಿದಂತೆ 51 ಮಂದಿಯನ್ನು ವಿಚಾರಣೆ ನಡೆಸಿ, ಪ್ರಕರಣದ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದರು. ಇನ್ನು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಡಿಜಿಪಿ – ಐಜಿಪಿ ಪ್ರವೀಣ್​ ಸೂದ್​, ಮಂಗಳೂರಿಗೆ ಭೇಟಿ ನೀಡಿ ತನಿಖೆಗೆ ಮತ್ತಷ್ಟು ಚುರುಕುಗೊಳಿಸಿದ್ದರು. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶುಕುಮಾರ್ ಹಾಗೂ ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಎಸಿಪಿ ಮಹೇಶ್ ಕುಮಾರ್ ಹಾಗೂ ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ ನೇತೃತ್ವದಲ್ಲಿ ತನಿಖೆ ನಡೆದಿತ್ತು‌

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

Video: ಪಶ್ಚಿಮ ಘಟ್ಟದಲ್ಲಿ ಜಲಸ್ಫೋಟ, ಇತಿಹಾಸ ದಾಖಲೆಯಲ್ಲಿ 75 ವರುಷಗಳ ನಂತರ ಸುಳ್ಯ- ಸುಬ್ರಹ್ಮಣ್ಯ ಸಂಪರ್ಕದ ಕಲ್ಲಾಜೆ ಸೇತುವೆ ಮುಳುಗಡೆಗೊಂಡಿದೆ

Next Post

ನಕಲಿ ಚಲನ್‍ಗಳನ್ನು ಅಪ್ಲೋಡ್ ಮಾಡಿ ರೋಡ್ ಟ್ಯಾಕ್ಸ್ ಕಟ್ಟದೇ ಕೋಟ್ಯಂತರ ರೂಪಾಯಿ ವಂಚನೆ!..

Related Posts

ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ
ಕ್ರೈಮ್ ನ್ಯೂಸ್

ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ

June 29, 2026
1.6k
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್
ಕ್ರೈಮ್ ನ್ಯೂಸ್

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್

June 26, 2026
59
Next Post
ನಕಲಿ ಚಲನ್‍ಗಳನ್ನು ಅಪ್ಲೋಡ್ ಮಾಡಿ ರೋಡ್ ಟ್ಯಾಕ್ಸ್ ಕಟ್ಟದೇ ಕೋಟ್ಯಂತರ ರೂಪಾಯಿ ವಂಚನೆ!..

ನಕಲಿ ಚಲನ್‍ಗಳನ್ನು ಅಪ್ಲೋಡ್ ಮಾಡಿ ರೋಡ್ ಟ್ಯಾಕ್ಸ್ ಕಟ್ಟದೇ ಕೋಟ್ಯಂತರ ರೂಪಾಯಿ ವಂಚನೆ!..

Discussion about this post

Recent News

ಕಂಕನಾಡಿ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದು ,ಇಬ್ಬರು ಮಕ್ಕಳು, ಒಬ್ಬ ಮಹಿಳೆ ಸಾವು

ಕಂಕನಾಡಿ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದು ,ಇಬ್ಬರು ಮಕ್ಕಳು, ಒಬ್ಬ ಮಹಿಳೆ ಸಾವು

July 1, 2026
87
1990ರಲ್ಲಿ ಕಾಶ್ಮೀರದ ನರ್ಸ್ ಸರಳಾ ಭಟ್ ಭೀಕರ ಹತ್ಯೆ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಉಗ್ರ ಯಾಸಿನ್ ಮಲಿಕ್ ಸೇರಿದಂತೆ 5 ಮಂದಿ ಆರೋಪಿಗಳ ಹೆಸರು ಉಲ್ಲೇಖ

1990ರಲ್ಲಿ ಕಾಶ್ಮೀರದ ನರ್ಸ್ ಸರಳಾ ಭಟ್ ಭೀಕರ ಹತ್ಯೆ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಉಗ್ರ ಯಾಸಿನ್ ಮಲಿಕ್ ಸೇರಿದಂತೆ 5 ಮಂದಿ ಆರೋಪಿಗಳ ಹೆಸರು ಉಲ್ಲೇಖ

July 1, 2026
29
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಂಕನಾಡಿ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದು ,ಇಬ್ಬರು ಮಕ್ಕಳು, ಒಬ್ಬ ಮಹಿಳೆ ಸಾವು

ಕಂಕನಾಡಿ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದು ,ಇಬ್ಬರು ಮಕ್ಕಳು, ಒಬ್ಬ ಮಹಿಳೆ ಸಾವು

July 1, 2026
1990ರಲ್ಲಿ ಕಾಶ್ಮೀರದ ನರ್ಸ್ ಸರಳಾ ಭಟ್ ಭೀಕರ ಹತ್ಯೆ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಉಗ್ರ ಯಾಸಿನ್ ಮಲಿಕ್ ಸೇರಿದಂತೆ 5 ಮಂದಿ ಆರೋಪಿಗಳ ಹೆಸರು ಉಲ್ಲೇಖ

1990ರಲ್ಲಿ ಕಾಶ್ಮೀರದ ನರ್ಸ್ ಸರಳಾ ಭಟ್ ಭೀಕರ ಹತ್ಯೆ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಉಗ್ರ ಯಾಸಿನ್ ಮಲಿಕ್ ಸೇರಿದಂತೆ 5 ಮಂದಿ ಆರೋಪಿಗಳ ಹೆಸರು ಉಲ್ಲೇಖ

July 1, 2026
ಮಂಗಳೂರು: ಮುಳುಗುತ್ತಿದ್ದ ಮೀನುಗಾರಿಕಾ ಬೋಟಿನಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

ಮಂಗಳೂರು: ಮುಳುಗುತ್ತಿದ್ದ ಮೀನುಗಾರಿಕಾ ಬೋಟಿನಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

June 30, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d