ಬಂಟ್ವಾಳ: ಬಿ. ಸಿ. ರೋಡ್ ಕೊಡಂಗೆ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಯಾತುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ.
ಕಿರಿಯರ ವಿಭಾಗದಲ್ಲಿ ಸಲ್ಮಾನ್ ಫಾರಿಶ್ ಕುರಾನ್ ಕಂಠಪಾಠದಲ್ಲಿ ಪ್ರಥಮ ಸ್ಥಾನ, ಹಿರಿಯರ ವಿಭಾಗದಲ್ಲಿಶಯಾನ್ ಕುರಾನ್ ಕಂಠಪಾಠದಲ್ಲಿ ಪ್ರಥಮ ಸ್ಥಾನ,ಫಾತೀಮಾ ತೌಯೀಬ ಇಂಗ್ಲಿಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನ, ತಶ್ಫೀಯ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕಿರಿಯರ ವಿಭಾಗದಲ್ಲಿ ಲುಬೈಬ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಕಿರಿಯರ ವಿಭಾಗದಲ್ಲಿ ಶೈಯಿಫಾ ಅಮೀನ ಅಭಿನಯ ಗೀತೆ ಹಾಡು ದ್ವಿತೀಯ ಸ್ಥಾನ, ಹಿರಿಯರ ವಿಭಾಗದಲ್ಲಿ ಫಾತೀಮಾ ತನೀಶ ಛದ್ಮವೇಶ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಹಿರಿಯರ ವಿಭಾಗದಲ್ಲಿ ಇಝ್ಮಾ ಆಶುಭಾಷಾಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ,
ಕಿರಿಯರ ವಿಭಾಗದಲ್ಲಿ ನಾಜೀಮ್ ಕವನ ವಾಚನದಲ್ಲಿ ತೃತೀಯ ಸ್ಥಾನ, ಕಿರಿಯರ ವಿಭಾಗದಲ್ಲಿ ಫಾಝೀಲ್ ಲಘು ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Discussion about this post