ಕೀವ್ : ಖಾರ್ಕಿವ್‌ನಿಂದ ತಕ್ಷಣವೇ ಹೊರಡುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ತನ್ನ ಎಲ್ಲಾ ನಾಗರಿಕರಿಗೆ ತುರ್ತು ಸಲಹೆಯನ್ನು ನೀಡಿದೆ. ಪ್ರಸ್ತುತ ಸಂದರ್ಭದಲ್ಲಿ, ಅವರು ಪೆಸೊಚಿನ್, ಬಾಬೆ ಮತ್ತು ಬೆಜ್ಲ್ಯುಡೋವ್ಕಾ ವಸಾಹತುಗಳನ್ನು ತಲುಪಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ.
“ತಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಅವರು ತಕ್ಷಣವೇ ಖಾರ್ಕಿವ್ ಅನ್ನು ತೊರೆಯಬೇಕು. ಪೆಸೊಚಿನ್, ಬಾಬಾಯೆ ಮತ್ತು ಬೆಜ್ಲ್ಯುಡೋವ್ಕಾಗೆ ಸಾಧ್ಯವಾದಷ್ಟು ಬೇಗ ತಲುಪಿರಿ,” ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.
ಇದಕ್ಕೂ ಮೊದಲು, ಪೋಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯುದ್ಧ ಪೀಡಿತ ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ತುರ್ತು ಸಲಹೆಯನ್ನು ನೀಡಿದೆ. ಪೋಲೆಂಡ್‌ಗೆ ತ್ವರಿತ ಪ್ರವೇಶಕ್ಕಾಗಿ ಬುಡೋಮಿಯರ್ಜ್ ಗಡಿಗೆ ಬೇಗನೆ ಪ್ರಯಾಣಿಸುವಂತೆ ಒತ್ತಾಯಿಸಿದೆ.
ಮಾರ್ಚ್ 1ರಂದು ಕೀವ್ ನಗರ ತೊರೆಯಲು ಸಲಹೆ:
ಮಾರ್ಚ್ 1ರಂದು ಕೀವ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಇದೇ ರೀತಿಯ ಸಲಹೆಯನ್ನು ನೀಡಲಾಯಿತು. ಮೇಲಾಗಿ “ಲಭ್ಯವಿರುವ ರೈಲುಗಳ ಮೂಲಕ ಅಥವಾ ಲಭ್ಯವಿರುವ ಇತರ ವಿಧಾನಗಳ ಮೂಲಕ” ರಾಜಧಾನಿ ತೊರೆಯುವಂತೆ ಕೇಳಿಕೊಳ್ಳಲಾಯಿತು.
ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ಭಾರತ ಸರ್ಕಾರವು ಪೋಲೆಂಡ್, ರೊಮೇನಿಯಾ, ಹಂಗೇರಿ ಮತ್ತು ಇತರ ನೆರೆಯ ರಾಷ್ಟ್ರಗಳಲ್ಲಿ ಆಪರೇಷನ್ ಗಂಗಾ ಮೂಲಕ ದೇಶದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಯತ್ನ ಮಾಡುತ್ತಿದೆ.