ಮಂಗಳೂರು, ಆ 4: ಹಣಕ್ಕಾಗಿ ತನ್ನ ಸಂಬಂಧಿಕರs ಆಗಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ಜೈಲು ಸೇರಿದ್ದ ವಾಮಂಜೂರು ಪ್ರವೀಣ(62) 28 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾನೆ. ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸನ್ನಡತೆಯ ಆಧಾರದಲ್ಲಿ ಕೆಲವು ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ. ಈ ಸರದಿಯಲ್ಲಿ ಮಂಗಳೂರಿನ ವಾಮಂಜೂರು ಪ್ರವೀಣನೂ ಹೆಸರೂ ಇದೆ. 90ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನೆ ಬೆಚ್ಚಿ ಬೀಳಿಸಿದ್ದ, ರಾಜ್ಯಾದ್ಯಂತ ಸಂಚಲನ ಸೃಷ್ಡಿಸಿದ್ದ ಮಂಗಳೂರಿನ ವಾಮಂಜೂರಿನಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿ, ಪ್ರಸ್ತುತ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಜೀವಾವಧಿ ಶಿಕ್ಷೆಗೊಳಗಾದ ಖೈದಿ, ಮೂಲತ: ದ.ಕ. ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ನಿವಾಸಿಯಾಗಿದ್ದ ಪ್ರವೀಣ್ ಕುಮಾರ್(62) ನನ್ನು ಬಿಡುಗಡೆಗೊಳಿಸಲು ಸರಕಾರ ನಿರ್ಧಾರಿಸಿದೆ. ಭಾರತದ 75 ನೇ ವರ್ಷ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಈತನ ಸಹಿತ ಹಲವರ ಬಿಡುಗಡೆಗೆ ನಿರ್ಧರಿಸಲಾಗಿದ್ದು ಇದಕ್ಕೆ ಈತನಿಂದ ಹತ್ಯೆಯಾದವರ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಾಮಜೂರು ಪ್ರವೀಣ್ ಕಳೆದ 23 ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದಾನೆ. ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಹಿನ್ನಲೆಯಲ್ಲಿ ಈತನನ್ನು ಕ್ಷಮಧಾನದ ಆಧಾರದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಆದರೆ, ಇದಕ್ಕೆ ಆತನಿಂದ ಕೊಲೆಯಾದವರ ಕುಟುಂಬದವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆತನನ್ನು ಬಿಡುಗಡೆ ಮಾಡದಂತೆ ಕುಟುಂಬಸ್ಥರು ಪೊಲೀಸ್ ಇಲಾಖೆ ಮೊರೆ ಹೋಗಿದ್ದು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಂಗಳೂರು ಪೊಲೀಸ್ ಕಮಿಷನರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲುತೀರ್ಮಾನ ಕೈಗೊಂಡಿದ್ದಾರೆ.
ಪ್ರವೀಣ ವೃತ್ತಿಯಲ್ಲಿ ಟೈಲರ್ ಮಾಡುತ್ತಿದ್ದ. ಮಂಗಳೂರಿನ ಚಿಲಿಂಬಿಯಲ್ಲಿದ್ದ ತಮಿಳು ಮೂಲದ ವ್ಯಕ್ತಿಗೆ ಪ್ರವೀಣ ಮತ್ತು ಆತನ ಪತ್ನಿ ಬಟ್ಟೆ ಹೊಲಿದು ಕೊಡುತ್ತಿದ್ದರು. ಇದಕ್ಕಾಗಿ ಪ್ರವೀಣ ವಾಮಂಜೂರಿನ ತನ್ನ ಸೋದರತ್ತೆ ಅಪ್ಪಿ ಶೇರಿಗಾರ್ತಿ ಮನೆಯಲ್ಲಿ ವಾಸವಿದ್ದ. ಒಂದಂಕಿ ಲಾಟರಿ ಚಟ ಇದ್ದ ಪ್ರವೀಣ ಲಾಟರಿ ತೆಗೆಯಲು ಹಣ ಇಲ್ಲದೆ ಅಲ್ಲಿ, ಇಲ್ಲಿ ಸಾಲ ಸೋಲ ಮಾಡಿದ್ದು, ಹಣ ಖಾಲಿಯಾದಾಗ ಕೊನೆಗೆ ತನ್ನ ಪತ್ನಿ, ಮನೆಯವರ ಚಿನ್ನವನ್ನೇ ಅಡವಿಟ್ಟಿದ್ದ. ಅಪ್ಪಿ ಶೇರಿಗಾರ್ತಿಯ ಪುತ್ರಿ ಶಕುಂತಳಾ ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಅಲ್ಲಿಂದ ಆಗಷ್ಟೆ ಬಂದು ಮರಳಿದ್ದರು. ಅತ್ತೆಯ ಅಳಿಯ ವಿದೇಶದಿಂದ ಹಣ ಅಥವಾ ಚಿನ್ನಾಭರಣ ತಂದಿರಬಹುದು ಎಂದು ಪ್ರವೀಣ ಅಂದುಕೊಂಡಿದ್ದ. ಇದೇ ದುರಾಸೆ ಪ್ರವೀಣನನ್ನು ಸಾಮೂಹಿಕ ಹತ್ಯೆಗೆ ಪ್ರಚೋದಿಸಿತು. ಅಂದು 1994ರ ಫೆ.23ರ ರಾತ್ರಿ ಎಂದಿನಂತೆ ಅತ್ತೆ ಮನೆಗೆ ಹೋದ ಪ್ರವೀಣ ಆಮ್ಲೆಟ್ ಮಾಡಿಸಿ ಅತ್ತೆ ಸೇರಿದಂತೆ ಮನೆಯವರೊಂದಿಗೆ ಸೇರಿ ಊಟ ಮಾಡಿ ಮಲಗಿದ್ದ. ಮಧ್ಯರಾತ್ರಿ ಸಮಯ ಮೊದಲೇ ನಿರ್ಧರಿಸಿದಂತೆ ಪಿಕ್ಕಾಸಿನ ಹಿಡಿ ತೆಗೆದು ಅಪ್ಪಿ ಶೇರಿಗಾರ್ತಿ, ಶಕುಂತಳಾ, ಗೋವಿಂದ ಮತ್ತು ದೀಪಿಕಾಳ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಾಲ್ವರ ಶವ ಸಂಸ್ಕಾರ ಆಗುವ ಹಂತದಲ್ಲಿದ್ದಾಗಲೇ ಪ್ರವೀಣನ ಮೇಲೆ ಸಂಶಯಪಟ್ಟಿದ್ದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ತೀವ್ರ ‘ವಿಚಾರಣೆ’ ನಡೆಸಿದರು. ವಿಚಾರಣೆಯಲ್ಲಿ ಆತ ಕೊಲೆ ಮಾಡಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದ. ಅಲ್ಲದೆ ದರೋಡೆ ಮಾಡಿದ್ದ ಚಿನ್ನಾಭರಣಗಳನ್ನು ಅಡಗಿಸಿಟ್ಟಿದ್ದ ಜಾಗವನ್ನು ಪೊಲೀಸರಿಗೆ ತೋರಿಸಿದ್ದ.
ಗೋವಾದಲ್ಲಿ ಅಡಗಿದ್ದ ಪ್ರವೀಣನನ್ನು 1999 ರಲ್ಲಿ ಮಂಗಳೂರಿನ ಇನ್ಸ್ ಪೆಕ್ಟರ್ ಜಯಂತ್ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ಪತ್ತೆಹಚ್ಚಿ ಬಂಧಿಸಿತ್ತು. ವಿಟಾರಣೆ ನಡೆಸಿದ ಮಂಗಳೂರಿನ ನ್ಯಾಯಾಲಯ ಪ್ರವೀಣನ ಕೃತ್ಯಕ್ಕಾಗಿ ಗಲ್ಲು ಶಿಕ್ಷೆ ವಿಧಿಸಿತ್ತು. ಮಂಗಳೂರಿನ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟು ಎತ್ತಿಹಿಡಿದಿತ್ತು. 2003 ರಲ್ಲಿ ಸುಪ್ರೀಂ ಕೋರ್ಟು ಎತ್ತಿ ಹಿಡಿದಿತ್ತು. ಗಲ್ಲು ಶಿಕ್ಷೆಯನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗೆ ಸಲ್ಲಿಸಿದ್ದ ಅರ್ಜಿಯನ್ನು 2013ರಲ್ಲಿ ರಾಷ್ಟ್ರಪತಿ ತಿರಸ್ಕರಿಸಿದ್ದರು. ಆದರೆ 2014, ಜನವರಿ 22 ರಂದು ಸುಪ್ರೀಂ ಕೋರ್ಟು ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.
Discover more from Coastal Times Kannada
Subscribe to get the latest posts sent to your email.







Discussion about this post