• About us
  • Contact us
  • Disclaimer
Tuesday, May 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ದಿಗಂತ್ ನಾಪತ್ತೆ ಕೆಸ್​ಗೆ ಬಿಗ್​ ಟ್ವಿಸ್ಟ್​: ಪಿಯುಸಿ ಪರೀಕ್ಷೆ ಭಯಕ್ಕೆ ಮೈಲಾರ ಸುತ್ತಿ ಬಂದ ದಿಗಂತ್ ರಿಮ್ಯಾಂಡ್ ಹೋಮಿಗೆ

Coastal Times by Coastal Times
March 9, 2025
in ಕರಾವಳಿ
ದಿಗಂತ್ ನಾಪತ್ತೆ ಕೆಸ್​ಗೆ ಬಿಗ್​ ಟ್ವಿಸ್ಟ್​: ಪಿಯುಸಿ ಪರೀಕ್ಷೆ ಭಯಕ್ಕೆ ಮೈಲಾರ ಸುತ್ತಿ ಬಂದ ದಿಗಂತ್ ರಿಮ್ಯಾಂಡ್ ಹೋಮಿಗೆ
100
VIEWS
WhatsappTelegramShare on FacebookShare on Twitter

ಮಂಗಳೂರು: ತೀವ್ರ ಆತಂಕಕ್ಕೆ ಕಾರಣವಾಗಿದ್ದ ಪರಂಗಿಪೇಟೆ ಕಿದೆಬೆಟ್ಟಿನ ಪಿಯುಸಿ ವಿದ್ಯಾರ್ಥಿ ದಿಗಂತ್ ಎಂಬಾತನ ನಿಗೂಢ ಕಣ್ಮರೆಗೆ ತಿರುವು ಸಿಕ್ಕಿದ್ದು, ಪರೀಕ್ಷಾ ಭೀತಿಯಿಂದ ಮನೆ ತೊರೆದಿದ್ದಾಗಿ ತನಿಖೆಯಲ್ಲಿ ಆತ ಬಾಯಿಬಿಟ್ಟಿರುವುದಾಗಿ ದ.ಕ.ಜಿಲ್ಲಾ ಎಸ್ಪಿ ಯತೀಶ್ ಎನ್ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಮಾಹಿತಿ ನೀಡಿದ ಅವರು, “ಆತ ಮೊದಲಿಗೆ ತನ್ನನ್ನು ಯಾರೋ ಕರೆದೊಯ್ದಿದ್ದಾಗಿ ಹೇಳಿದ್ದ. ಆದರೆ ಸಮಾಧಾನಿಸಿ ನಿಧಾನವಾಗಿ ಬಾಯಿ ಬಿಡಿಸಿದಾಗ ಪರೀಕ್ಷೆಗೆ ಸರಿಯಾಗಿ ತಯಾರಾಗದಿದ್ದ ಕಾರಣಕ್ಕೆ ಭಯದಿಂದ ಮನೆ ತೊರೆದೆ ಎಂದು ಹೇಳಿದ್ದಾನೆ” ಎಂದರು.

“ಫೆ.25ರಂದು ಸಂಜೆ ವೇಳೆ 500 ರೂ. ಹಣದೊಂದಿಗೆ ಮನೆ ಬಿಟ್ಟವನು, ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬಂದು ಅರ್ಕುಳ ತಲುಪಿದ್ದಾನೆ. ಅಲ್ಲಿ ಮುಖ್ಯರಸ್ತೆಗೆ ಬಂದು ಬೈಕೊಂದರಲ್ಲಿ ಲಿಫ್ಟ್ ಪಡೆದು ಮಂಗಳೂರು ನಗರಕ್ಕೆ ಬಂದಿದ್ದಾನೆ‌. ಅಲ್ಲಿಂದ ಬಸ್‌ನಲ್ಲಿ ಶಿವಮೊಗ್ಗಕ್ಕೆ ಹೋಗಿದ್ದಾನೆ. ಅಲ್ಲಿ ರೈಲು ಹತ್ತಿ ಮೈಸೂರಿಗೆ ತೆರಳಿದ್ದಾನೆ. ಅಲ್ಲಿಂದ ಕೆಂಗೇರಿಗೆ ಹೋಗಿದ್ದಾನೆ. ಬಳಿಕ ನಂದಿಹಿಲ್ಸ್ ಬೆಟ್ಟಕ್ಕೆ ಹೋಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ‌2 ದಿನ ಕೆಲಸ ಮಾಡಿ, ಹಣ ಪಡೆದುಕೊಂಡಿದ್ದಾನೆ. ಬಳಿಕ ವಾಪಸ್ ನಂದಿಹಿಲ್ಸ್‌ನಿಂದ ಕೆಂಗೇರಿ, ಅಲ್ಲಿಂದ ಮೈಸೂರಿಗೆ ಬಂದಿದ್ದಾನೆ. ಅಲ್ಲಿ ಶುಕ್ರವಾರ ರಾತ್ರಿ ರೈಲಿನಲ್ಲಿ ಉಡುಪಿಗೆ ಬಂದಿದ್ದಾನೆ” ಎಂದು ಅವರು ವಿವರಿಸಿದರು.

“ಉಡುಪಿಯಲ್ಲಿ ತಿನ್ನಲು ಹಾಗೂ ಬಟ್ಟೆ ಖರೀದಿಸಲು ಸ್ಥಳೀಯ ಅಂಗಡಿಗೆ ಹೋಗಿದ್ದಾನೆ. ಅಲ್ಲಿ ಹಣ ಕಡಿಮೆಯಾಗಿ ಓಡಲು ಅನುವಾದಾಗ ಸಿಬ್ಬಂದಿ ತಡೆದು ವಿಚಾರಿಸಿ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಪೊಲೀಸರು ಆತನನ್ನು ರಕ್ಷಿಸಿದರು. ದ.ಕ. ಜಿಲ್ಲಾ ಪೊಲೀಸರು ಆತನನ್ನು ಕರೆತಂದು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲಾಗಿದೆ. ಇದೀಗ ಬೋಂದೆಲ್‌ ಬಾಲಗೃಹದಲ್ಲಿ ಇರಿಸಲಾಗಿದೆ. ಹೆತ್ತವರು ಆತನ ಪತ್ತೆಗೆ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದ್ದರಿಂದ ನಾವು ಹೈಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಲಯ ಏನೂ ಸೂಚಿಸಿತ್ತೋ ಅದರಂತೆ ಮುಂದುವರಿಯಲಿದ್ದೇವೆ‌” ಎಂದು ಎಸ್ಪಿ ಯತೀಶ್ ಹೇಳಿದರು.

ರೈಲ್ವೇ ಟ್ರ್ಯಾಕ್‌ ಬಳಿ ರಕ್ತದ ಕಲೆ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದ ಎಸ್.ಪಿ,  ಅವನ ಪಾದದಲ್ಲಿ ಗಾಯವಾಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಎಂದು ಆತನೇ ಹೇಳಿದ್ದಾನೆ. ಅವನನ್ನು ಯಾರೂ ಎತ್ತಿಕೊಂಡು ಹೋಗಿರಲಿಲ್ಲ, ಅವನೇ ಹೋಗಿದ್ದ. ಅವನ ಇಡೀ ಪ್ರಯಾಣದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ. ಕಲಿಯುವುದರಲ್ಲಿ ಅವನು ಹುಷಾರಿದ್ದ, ಕೆಲ ದಿನಗಳಿಂದ ಸ್ವಲ್ಪ ಮಂಕಾಗಿದ್ದ ಎಂದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು:12 ದಿನದ ಹಿಂದೆ ನಾಪತ್ತೆಯಾಗಿದ್ದ ದಿಗಂತ್‌ ಕೊನೆಗೂ ಉಡುಪಿಯಲ್ಲಿ ಪತ್ತೆ

Next Post

ಕಾಸರಗೋಡು: ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಶವವಾಗಿ ಪತ್ತೆ

Related Posts

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.
ಕರಾವಳಿ

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
44
ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ
ಕರಾವಳಿ

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

May 23, 2026
74
Next Post
ಕಾಸರಗೋಡು: ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಶವವಾಗಿ ಪತ್ತೆ

ಕಾಸರಗೋಡು: ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಶವವಾಗಿ ಪತ್ತೆ

Discussion about this post

Recent News

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

May 26, 2026
45
ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
44
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

May 26, 2026
ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

May 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d