• About us
  • Contact us
  • Disclaimer
Thursday, July 16, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಹೊಸವರ್ಷ-2026ರ ಆಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದ ಮಂಗಳೂರು ಪೊಲೀಸ್ ಕಮಿಷನರ್

Coastal Times by Coastal Times
December 18, 2025
in ಕರಾವಳಿ
ಹೊಸವರ್ಷ-2026ರ ಆಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದ ಮಂಗಳೂರು ಪೊಲೀಸ್ ಕಮಿಷನರ್
57
VIEWS
WhatsappTelegramShare on FacebookShare on Twitter

ಮಂಗಳೂರು: ಇನ್ನೇನು ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀ‌ರ್ ಕುಮಾರ್ ರೆಡ್ಡಿ ಅವರು ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಹೊಸ ವರ್ಷಾಚರಣೆ ಆಯೋಜಿಸುವ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹಾಗೂ ಇತರ ಸಂಸ್ಥೆಗಳು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯ ಆಯುಕ್ತರ ಕಚೇರಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಕಾರ್ಯಕ್ರಮ ರಾತ್ರಿ 12.30ರೊಳಗೆ ಪೂರ್ಣಗೊಳ್ಳಬೇಕು. ಅದಕ್ಕಾಗಿ ಡಿ.23ರಂದು ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಇತರ ಪ್ರಮುಖ ಮಾರ್ಗಸೂಚಿಗಳು:

1. ಪೂರ್ವಾನುಮತಿಯಿಲ್ಲದ ಹೊಸ ವರ್ಷಚರಣೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

2. ಹೊಸ ವರ್ಷಾಚರಣೆ ನೆಪದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ.

3. ಹೊಸ ವರ್ಷಾಚರಣೆ ಡಿ.31ರಂದು ರಾತ್ರಿ 12:30 ಒಳಗಾಗಿ ಪೂರ್ಣಗೊಳ್ಳಬೇಕು. ಬಳಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿಸಲಾಗುವುದಿಲ್ಲ.

4. ಧ್ವನಿಮುದ್ರಣ ವ್ಯವಸ್ಥೆಗಳು, ಲೌಡ್ ಸ್ಪೀಕರ್‌ಗಳನ್ನು ಬಳಸಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವ ಅನುಮತಿಯನ್ನು ಪಡೆಯಬೇಕು. ಧ್ವನಿಯ ಮಟ್ಟವು ಶಬ್ದ ಮಾಲಿನ್ಯ ನಿಯಮಗಳು 2000 ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಬೇಕು. ಡಿಜೆ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

5. ಹೊಸ ವರ್ಷಾಚರಣೆ ಕಾರ್ಯಕ್ರಮಗಳಲ್ಲಿ ಯಾವುದೇ ಕಾರಣಕ್ಕೂ ನಿಷೇದಿತ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಸೇವನೆಯನ್ನು ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

6. ಹೊಸವರ್ಷ ಸಂಭ್ರಮಾಚರಣೆಯ ನೆಪದಲ್ಲಿ ಅಶ್ಲೀಲ ನೃತ್ಯಗಳು, ಅರೆನಗ್ನ ಪ್ರದರ್ಶನಗಳು, ಜೂಜು ಹಾಗೂ ಇತರ ಅನೈತಿಕ ಚಟುವಟಿಕೆಗಳನ್ನು ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

7. ಮದ್ಯ ಮಾರಾಟ ಮತ್ತು ವಿತರಣೆಗೆ ಸ್ಥಳೀಯ ಅಬಕಾರಿ ಇಲಾಖೆಯಿಂದ ಲಿಖಿತ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು.

8. ಆಯೋಜಕರು ಸಂಬಂಧಿತ ಇಲಾಖೆಗಳಿಂದ ಪಡೆದ ಲೈಸನ್ಸ್ ಮತ್ತು ಅನುಮತಿ ಪ್ರಕಾರ ನಿರ್ಧರಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

9. ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ಉದ್ಯಾನಗಳು, ಕ್ರೀಡಾಂಗಣಗಳು, ರೈಲ್ವೆ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

10. ವಿದ್ಯಾರ್ಥಿಗಳು ಅಥವಾ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿ ಕಿಡಿಗೇಡಿತನವನ್ನು ಪ್ರದರ್ಶನ ಮಾಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

11. ಎ) ಆಯೋಜಕರು ಅಗತ್ಯವಿರುವ ಸುರಕ್ಷತಾ ಕ್ರಮಗಳೊಂದಿಗೆ ಅಗ್ನಿಶಾಮಕ ಸಾಧನಗಳನ್ನು, ತುರ್ತು ವೈದ್ಯಕೀಯ ವಾಹನಗಳನ್ನು ಮತ್ತು ಇತರ ಭದ್ರತಾ ಕ್ರಮಗಳನ್ನು ಸಂಯೋಜಿಸಬೇಕು.

12. ಬಿ) ಆಯೋಜಕರು ಯಾವುದೇ ಅನಾಹುತದ ತಡೆಗಾಗಿ ಪೂರಕ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಆಯೋಜಕರುಗಳು ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸಬೇಕು.

13. ಸಿ) ಹೊಸ ವರ್ಷಾಚರಣೆಯನ್ನು ನಡೆಸುವ ಹೊಟೇಲ್, ಕ್ಲಬ್ ಅಥವಾ ವಿಶೇಷ ಕೂಟಗಳ ವ್ಯವಸ್ಥಾಪಕರು ಕಾರ್ಯಕ್ರಮಗಳಲ್ಲಿ ಮದ್ಯವಿತರಣೆ ವ್ಯವಸ್ಥೆಗೊಳಿಸಿದ್ದ ಪಕ್ಷದಲ್ಲಿ 19 ವರ್ಷದ ಕೆಳಗಿನ ಅಪ್ರಾಪ್ತರಿಗೆ ಅಂತಹ ಕಾರ್ಯಕ್ರಮಗಳಿಗೆ ಪ್ರವೇಶ ನಿರ್ಬಂಧಿಸಬೇಕು.

14. ಸಂಭ್ರಮಾಚರಣೆಯ ಹೆಸರಿನಲ್ಲಿ ಮಹಿಳೆಯರು, ಹೆಣ್ಣುಮಕ್ಕಳನ್ನು ಚುಡಾಯಿಸುವ, ಕಿರುಕುಳ ನೀಡುವ, ಹಿಂಸಾಚಾರ ಅಥವಾ ಅಶ್ಲೀಲ ಚಟುವಟಿಕೆಗಳನ್ನು ತಡೆಹಿಡಿಯಲು ವಿಶೇಷ ಕಾರ್ಯಪಡೆಗಳು ನಿಯೋಜಿಸಲಾಗುತ್ತವೆ.

15. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆಯು ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ರೀತಿಯ ಕಾನೂನು ಕ್ರಮ ಕೈಗೊಂಡು ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು.

16. ಸ್ಟಂಟ್ ಚಟುವಟಿಕೆಗಳು, ವೀಲಿಂಗ್, ಡ್ರಾಗ್ ರೇಸಿಂಗ್, ವೇಗದ ಚಾಲನೆಯು ಮತ್ತು ಧ್ವನಿಯ ಶಬ್ದರಾಶಿ ಉತ್ಪಾದಿಸುವ ಕಾರ್ಯಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ಘಟನೆಗಳನ್ನು ತಡೆಹಿಡಿಯಲು ವಿಶೇಷ ತಂಡಗಳನ್ನು ನಿಯೋಜಿಸಲಾಗುತ್ತವೆ.

17. ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸಮುದ್ರ ಬದಿಗಳಲ್ಲಿ ಮದ್ಯಪಾನ ಸೇವಿಸುವುದು, ಅಶ್ಲೀಲ ವರ್ತನೆಗಳು, ಇತರ ಅಶ್ಲೀಲ ಪ್ರದರ್ಶನಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಈ ಮಾರ್ಗಸೂಚಿಗಳು ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಹಿತಕ್ಕಾಗಿ ಹೊರಡಿಸಲಾಗಿವೆ. ನಾಗರಿಕರು ಮತ್ತು ಆಯೋಜಕರು ಶಾಂತವಾಗಿ ಹೊಸ ವರ್ಷಾಚರಣೆ ಮಾಡಬೇಕು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಧರ್ಮಸ್ಥಳ ಪ್ರಕರಣದಲ್ಲಿ ಜಾಮೀನು ಸಿಕ್ಕರೂ 23 ದಿನಗಳಿಂದ ಶಿವಮೊಗ್ಗ ಜೈಲಿನಲ್ಲೇ ಉಳಿದಿದ್ದ ಚಿನ್ನಯ್ಯನಿಗೆ ಕಡೆಗೂ ಬಿಡುಗಡೆ ಭಾಗ್ಯ

Next Post

ವಿಶ್ವಕಪ್​ ಗೆದ್ದ ಪ್ರತಿಯೊಬ್ಬ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಸಿಕ್ತು ಟಾಟಾ ಸಿಯೆರಾ ಎಸ್‌ಯುವಿ ಗಿಫ್ಟ್!

Related Posts

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ! ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ
ಕರಾವಳಿ

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ! ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

July 13, 2026
30
“Mangalore IAS – A School for Civil Services” ಸಂಸ್ಥೆ ಉದ್ಘಾಟನೆ
ಕರಾವಳಿ

“Mangalore IAS – A School for Civil Services” ಸಂಸ್ಥೆ ಉದ್ಘಾಟನೆ

July 12, 2026
47
Next Post
ವಿಶ್ವಕಪ್​ ಗೆದ್ದ ಪ್ರತಿಯೊಬ್ಬ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಸಿಕ್ತು ಟಾಟಾ ಸಿಯೆರಾ ಎಸ್‌ಯುವಿ ಗಿಫ್ಟ್!

ವಿಶ್ವಕಪ್​ ಗೆದ್ದ ಪ್ರತಿಯೊಬ್ಬ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಸಿಕ್ತು ಟಾಟಾ ಸಿಯೆರಾ ಎಸ್‌ಯುವಿ ಗಿಫ್ಟ್!

Discussion about this post

Recent News

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

July 15, 2026
30
ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

July 15, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

July 15, 2026
ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

July 15, 2026
ಸುರತ್ಕಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ಸುರತ್ಕಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

July 15, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d