• About us
  • Contact us
  • Disclaimer
Sunday, September 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲ ನಗರಸಭೆ: ಕಿವಿಗೆ ಹೂವಿಟ್ಟು ಕಾಂಗ್ರೆಸ್ ನಾಯಕರನ್ನ ಅಣಕಿಸಿದ ಜೆಡಿಎಸ್, ಸದಸ್ಯರ ನಡುವೆ ತಳ್ಳಾಟ

Coastal Times by Coastal Times
February 21, 2023
in ಕರಾವಳಿ
ಉಳ್ಳಾಲ ನಗರಸಭೆ: ಕಿವಿಗೆ ಹೂವಿಟ್ಟು ಕಾಂಗ್ರೆಸ್ ನಾಯಕರನ್ನ ಅಣಕಿಸಿದ ಜೆಡಿಎಸ್, ಸದಸ್ಯರ ನಡುವೆ ತಳ್ಳಾಟ
115
VIEWS
WhatsappTelegramShare on FacebookShare on Twitter

ಉಳ್ಳಾಲ : ಇಲ್ಲಿನ ನಗರಸಭೆಯಲ್ಲಿ 2023-24 ನೇ ಸಾಲಿನ ಬಜೆಟ್  ಮಂಡನೆ ಸಂದರ್ಭದಲ್ಲಿ ಬಜೆಟ್ ಅನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಕಿವಿಗೆ ಹೂವಿಟ್ಟು ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಅಣಕಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡನೆ ಮಾಡುವಾಗ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕರು ಸದನದಲ್ಲಿ ಕಿವಿಗೆ ಹೂ ಇಟ್ಟು ಬಿಜೆಪಿ ಸರ್ಕಾರವನ್ನ ಅಣಕಿಸಿ ಗಮನ ಸೆಳೆದಿದ್ದರು. ಕಾಂಗ್ರೆಸ್ ಬಳಸಿದ ಇದೇ ಅಸ್ತ್ರವನ್ನೇ  ಉಳ್ಳಾಲ ನಗರ ಸಭೆಯ ಜೆಡಿಎಸ್ ಸದಸ್ಯರು ಬಳಸಿದರು. ಆರಂಭದಲ್ಲಿ ಚೆನ್ನಾಗಿಯೇ ನಡೆದ ಸಭೆ ಕೊನೆಗೆ ಗದ್ದಲದಲ್ಲಿ ಅಂತ್ಯವಾಯಿತು.

ಬಜೆಟ್ ಮಂಡನೆ ವೇಳೆ ಜೆಡಿಎಸ್ ನ ಸದಸ್ಯರಾದ ದಿನಕರ ಉಳ್ಳಾಲ್, ಅಬ್ದುಲ್ ಬಶೀರ್ , ಖಲೀಲ್, ಜಬ್ಬಾರ್, ಮುಷ್ತಾಕ್ ಪಟ್ಲ ಅವರು ಕಿವಿಗೆ ಹೂವಿಟ್ಟು ಬಜೆಟ್ ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದರು.

ಈ ವೇಳೆ ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಬಾಬು ಬಂಗೇರ ಮಾತನಾಡಿ, ‘ಕಾಂಗ್ರೆಸ್  ಬಜೆಟ್‌ಗೆ ಬೆಂಬಲ ಸೂಚಿಸಿದರೆ, ಜೆಡಿಎಸ್‌ನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ನಾವು ಬಜೆಟ್ ವಿಚಾರದಲ್ಲಿ ತಟಸ್ಥ’ ಎಂದಾಕ್ಷಣ ಸಭೆಯ ವೇದಿಕೆಯಲ್ಲಿದ್ದ ನಗರಸಭೆ ಉಪಾಧ್ಯಕ್ಷ ಆಯುಬ್ ಮಂಚಿಲ ಟೇಬಲನ್ನ ಬಡಿದು ಬೆಂಬಲ ಸೂಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ನ ದಿನಕರ್ ಉಳ್ಳಾಲ್, ‘ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ನಡೆಸುತ್ತಿವೆ. ನೀವಿಬ್ಬರು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಆಕ್ಷೇಪಿಸಿದರು. ಆಡಳಿತ- ವಿರೋಧ ಪಕ್ಷಗಳ ನಡುವೆ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಅಧ್ಕಕ್ಷತೆ ವಹಿಸಿದ್ದ ನಗರ ಸಭೆ ಅಧ್ಯಕ್ಷೆ ಚಿತ್ರಕಲಾ ಅವರು ಗದ್ದಲ ,ಗಲಾಟೆಯ ಮಧ್ಯೆಯೇ ರಾಷ್ಟ್ರಗೀತೆ ಹಾಡುವುದಕ್ಕೆ‌ ಸೂಚಿಸಿದರು.

ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಕ್ಕೆ‌ ಆಕ್ಷೇಪಿಸಿದ ಎಸ್‌ಡಿಪಿಐ ಸದಸ್ಯ ಅಸ್ಗರ್ ಆಲಿ, ‘ಸಭೆ ಸಂಪೂರ್ಣಗೊಂಡಿಲ್ಲ’ ಎಂಬುದಾಗಿ ದಾಖಲಿಸಬೇಕು’ ಎಂದು  ಸೂಚಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ನ ಭಾರತಿ ಮತ್ತು ವೀಣಾ ಶಾಂತಿ ಡಿ‌ಸೋಜ  ಅಸ್ಗರ್ ವಿರುದ್ಧ ಪೊಲೀಸ್ ದೂರು ನೀಡುವಂತೆ ಹೇಳಿದ್ದು ಎಸ್ಡಿಪಿಐ ಸದಸ್ಯರನ್ನು ಕೆರಳಿಸಿತು.‌ ಅಸ್ಗರ್ ಕಾಂಗ್ರೆಸ್ ಸದಸ್ಯೆಯರ ವಿರುದ್ಧ ಮುಗಿಬಿದ್ದರು. ಈ ವೇಳೆ  ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆಯಿತು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಅಧಿಕಾರಿಗಳ ಬೀದಿಜಗಳ, ಡಿ ರೂಪಾ, ರೋಹಿಣಿ ಸಿಂಧೂರಿಯನ್ನು ಹುದ್ದೆ ಸೂಚಿಸದೆ ಎತ್ತಂಗಡಿ ಶಿಕ್ಷೆ ; ಮೌನೀಶ್ ಮೌದ್ಗಿಲ್ ಸಹ ಎತ್ತಂಗಡಿ

Next Post

ಫೆ.24ರಂದು ನಗರದಲ್ಲಿ ಡಾ. ರೊನಾಲ್ಡ್‌ ಕೊಲಾಸೊ ಅವರಿಗೆ “ನಾಗರಿಕ ಸನ್ಮಾನ”

Related Posts

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು
ಕರಾವಳಿ

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

September 27, 2026
105
ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ
ಕರಾವಳಿ

ಸೆ.27ರಂದು ಕೊಚ್ಚಿಯಲ್ಲಿ ಕೇರಳ-ಕರ್ನಾಟಕ ಜಾನಪದ ಉತ್ಸವ : ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಅವರಿಗೆ ಸಾಧಕ ರತ್ನ ಗೌರವ

September 25, 2026
18
Next Post
ಫೆ.24ರಂದು ನಗರದಲ್ಲಿ ಡಾ. ರೊನಾಲ್ಡ್‌ ಕೊಲಾಸೊ ಅವರಿಗೆ “ನಾಗರಿಕ ಸನ್ಮಾನ”

ಫೆ.24ರಂದು ನಗರದಲ್ಲಿ ಡಾ. ರೊನಾಲ್ಡ್‌ ಕೊಲಾಸೊ ಅವರಿಗೆ "ನಾಗರಿಕ ಸನ್ಮಾನ"

Discussion about this post

Recent News

ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು

ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು

September 27, 2026
4
ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

September 27, 2026
105
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು

ಮಂಗಳೂರು: ಯುರೋಪ್‌ನ ಲಕ್ಸೆಂಬರ್ಗ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಕಲಿ ಸಂದರ್ಶನ ಪಂಪ್‌ವೆಲ್‌ನ ‘ಓರ್ಲಾ ಕೆರಿಯರ್ ಸೊಲ್ಯೂಷನ್ಸ್’ ವಿರುದ್ಧ ಎಫ್‌ಐಆರ್ ದಾಖಲು

September 27, 2026
ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಂಭ್ರಮಾಚರಣೆ ವೇಳೆ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

September 27, 2026
ಬಂಟ್ವಾಳ ಆಟೋರಿಕ್ಷಾದಲ್ಲಿ ಬಂದು ತಲವಾರು, ರಾಡ್‌ನಿಂದ ಮಾರಣಾಂತಿಕ ಹಲ್ಲೆ: ಮೂವರು ಆರೋಪಿಗಳ ಬಂಧನ

ಬಂಟ್ವಾಳ ಆಟೋರಿಕ್ಷಾದಲ್ಲಿ ಬಂದು ತಲವಾರು, ರಾಡ್‌ನಿಂದ ಮಾರಣಾಂತಿಕ ಹಲ್ಲೆ: ಮೂವರು ಆರೋಪಿಗಳ ಬಂಧನ

September 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d