• About us
  • Contact us
  • Disclaimer
Tuesday, September 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕೇರಳ ಮೂಲದ ಉದ್ಯಮಿಯ ಹನಿಟ್ರ್ಯಾಪ್ ; ಮೂಡುಬಿದ್ರೆಯ ಯುವತಿ ಸೇರಿ ಎಂಟು ಮಂದಿಯ ಬಂಧನ

Coastal Times by Coastal Times
June 28, 2023
in ಕ್ರೈಮ್ ನ್ಯೂಸ್
ಕೇರಳ ಮೂಲದ ಉದ್ಯಮಿಯ ಹನಿಟ್ರ್ಯಾಪ್ ; ಮೂಡುಬಿದ್ರೆಯ ಯುವತಿ ಸೇರಿ ಎಂಟು ಮಂದಿಯ ಬಂಧನ
263
VIEWS
WhatsappTelegramShare on FacebookShare on Twitter

ಕುಂದಾಪುರ, ಜೂ 28 : ಹೆಣ್ಣಿನಾಸೆಯಿಂದ ಮಂಗಳೂರಿಗೆ ಬಂದಿದ್ದ ಕೇರಳ ಮೂಲದ ಉದ್ಯಮಿಯನ್ನು ತಂಡವೊಂದು ಹನಿಟ್ರ್ಯಾಪ್ ಮಾಡಿ ಬ್ಲಾಕ್ಮೇಲ್ ಮಾಡಿದ್ದು, ಯುವತಿ ಸೇರಿ ಎಂಟು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಸುರೇಂದ್ರ (29) ಮುರಳಿ ಕೃಷ್ಣ(26) ಕಿಶೋರ್ (32), ಸುಶಾಂತ್(23), ಲಿಖಿತ್(23)  ತರುಣ್(20) ಮತ್ತು  ಅಕ್ಷತಾ(24) ಎನ್ನುವವರಾಗಿದ್ದಾರೆ. ಕಳೆದ ಫೆಬ್ರವರಿ ತಿಂಗಳ 16ರಂದು ವಾಮಂಜೂರು ಬಳಿಯ ಮೂಡುಶೆಡ್ಡೆಯ ರೆಸಾರ್ಟಿನಲ್ಲಿ ಘಟನೆ ನಡೆದಿತ್ತು. ಕೇರಳ ಮೂಲದ ಮೊಯ್ದೀನ್ ಕುಂಞ(45) ಮತ್ತು ಮೊಹಮ್ಮದ್ ರುಕ್ಸಾದ್ ಎಂಬವರು ಬೇರೆಯವರ ಮೂಲಕ ಸಂಪರ್ಕಕ್ಕೆ ಬಂದಿದ್ದ ಮೂಡುಬಿದ್ರೆ ಮೂಲದ ಹುಡುಗಿಯ ಜೊತೆಗೆ ರೆಸಾರ್ಟಿಗೆ ತೆರಳಿದ್ದರು. ರಾತ್ರಿ ವೇಳೆ ಅಲ್ಲಿದ್ದಾಗಲೇ ತಂಡವೊಂದು ಕೊಠಡಿಗೆ ಎಂಟ್ರಿ ಕೊಟ್ಟಿದ್ದು, ಯುವಕರು ಫೋಟೋ, ವಿಡಿಯೋ ಮಾಡಿದ್ದರು. ಮೊಯ್ದೀನ್ ಕುಂಞಗೆ ಹಲ್ಲೆಗೈದು ಹಣಕ್ಕಾಗಿ ಪೀಡಿಸಿದ್ದರು. ಅಲ್ಲದೆ, ಇಂತಿಷ್ಟು ಹಣ ಕೊಟ್ಟರೆ ಮಾತ್ರ ಬಿಡ್ತೀವಿ, ಇಲ್ಲಾಂದ್ರೆ ವಿಡಿಯೋವನ್ನು ಜಾಲತಾಣದಲ್ಲಿ ಹಾಕುತ್ತೇವೆಂದು ಬ್ಲಾಕ್ಮೇಲ್ ಮಾಡಿದ್ದರು. ಬೆದರಿದ ಮೊಯ್ದೀನ್ ಕುಂಞ ಹಣ ಕೊಟ್ಟು ಅಲ್ಲಿಂದ ಪಾರಾಗಿ ಬಂದಿದ್ದರು.

ಆದರೆ ಯುವಕರ ತಂಡ ಪದೇ ಪದೇ ಕರೆ ಮಾಡಿ, ಹಣಕ್ಕಾಗಿ ಪೀಡಿಸಿದ್ದಾರೆ. ಗೂಗಲ್ ಪೇ, ಬ್ಯಾಂಕ್ ಅಕೌಂಟ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು. ಮೂರು ತಿಂಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಹಣವನ್ನು ಕಳಕೊಂಡ ಮೊಯ್ದೀನ್ ಕುಂಞ ಇತ್ತೀಚೆಗೆ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದರು. ಕಮಿಷನರ್ ಸೂಚನೆಯಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪ್ರೀತಮ್ ಬೊಂದೇಲ್, ಮೂಡುಶೆಡ್ಡೆ ಆಸುಪಾಸಿನ ಕಿಶೋರ್, ಮುರಳಿ, ಸುಶಾಂತ್, ಅಭಿ ಸೇರಿ ಮೂಡುಬಿದ್ರೆ ಮೂಲದ ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ.

ಯುವತಿಗೂ ಬ್ಲಾಕ್ಮೇಲ್ ಮಾಡಿದ ಯುವಕರಿಗೂ ಕನೆಕ್ಷನ್ ಇದೆಯೆನ್ನುವ ಮಾಹಿತಿಯಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿ ಇದೇ ರೀತಿಯ ಹಿನ್ನೆಲೆ ಹೊಂದಿದ್ದು, ಯುವಕರನ್ನು ಬಲೆಗೆ ಕೆಡವಿ ಹಣ ಮಾಡಿಕೊಳ್ಳುತ್ತಿದ್ದಳು. ಆರೋಪಿಗಳ ಪೈಕಿ ಸುರೇಂದ್ರ ಅಲಿಯಾಸ್ ಪ್ರೀತಂ(ಪ್ರೀತು)ಎಂಬಾತನ ವಿರುದ್ಧ ಈ ಹಿಂದೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಮಂಗಳೂರು ಪೂರ್ವ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಇನ್ನೋರ್ವ ಆರೋಪಿ ಕಿಶೋರ್ ಎಂಬಾತನ ವಿರುದ್ಧ ಈ ಹಿಂದೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಸುಶಾಂತ್ ಎಂಬಾತನ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಡೆಡ್‌ಲೈನ್; ಜೂನ್‌ 30ರೊಳಗೆ ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು!

Next Post

ಮಂಗಳೂರು ಮೇರಿಹಿಲ್ ಬಳಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಬಾಲಕರಿಬ್ಬರು ಬಲಿ

Related Posts

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ
ಕ್ರೈಮ್ ನ್ಯೂಸ್

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ

September 5, 2026
28
ಮಂಗಳೂರು: ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಖಾಸಗಿ ಬಸ್ ಪಲ್ಟಿ ; ಅಪಾಯದಿಂದ ಪಾರಾದ ಪ್ರಯಾಣಿಕರು
ಕ್ರೈಮ್ ನ್ಯೂಸ್

ಮಂಗಳೂರು: ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಖಾಸಗಿ ಬಸ್ ಪಲ್ಟಿ ; ಅಪಾಯದಿಂದ ಪಾರಾದ ಪ್ರಯಾಣಿಕರು

September 4, 2026
73
Next Post
ಮಂಗಳೂರು ಮೇರಿಹಿಲ್ ಬಳಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಬಾಲಕರಿಬ್ಬರು ಬಲಿ

ಮಂಗಳೂರು ಮೇರಿಹಿಲ್ ಬಳಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಬಾಲಕರಿಬ್ಬರು ಬಲಿ

Discussion about this post

Recent News

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

September 7, 2026
35
ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

September 7, 2026
20
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

September 7, 2026
ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

September 7, 2026
ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

September 7, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d