ಮಂಗಳೂರು, ಸೆ.3: ನಗರದ ಫಳ್ನೀರ್ ನಲ್ಲಿರುವ BLINK IT ಆಹಾರ ಮಳಿಗೆಯಿಂದ ಆನ್ಲೈನಲ್ಲಿ ಖರೀದಿಸಿದ್ದ ಮೊಟ್ಟೆಯಲ್ಲಿ ಹುಳು ಆಗಿದೆ ಎಂಬ ಗ್ರಾಹಕರೊಬ್ಬರ ದೂರಿನಂತೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು ಗೋದಾಮು ಕೋಣೆಯನ್ನು ಸೀಲ್ ಮಾಡಿದ್ದಾರೆ.
ಗ್ರಾಹಕರಿಂದ ಸಚಿವರಿಗೆ ದೂರು ಬೆನ್ನಲ್ಲೇ ಆಹಾರ ಇಲಾಖೆ ದಾಳಿ: ಆನ್ಲೈನಲ್ಲಿ ಖರೀದಿಸಿದ್ದ ಮೊಟ್ಟೆಯಲ್ಲಿ ಹುಳು ಇರುವುದನ್ನು ಕಂಡು ಗ್ರಾಹಕರೊಬ್ಬರು ನೇರವಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಅವರಿಗೆ ದೂರು ನೀಡಿದ ಹಿನ್ನೆಲೆ ಇಲಾಖೆಯ ಅಧಿಕಾರಿಗಳು ಫಳ್ನೀರ್ ಸ್ಕ್ವೇರ್‌ನಲ್ಲಿರುವ ಬ್ಲಿಂಕಿಟ್ ಸಂಸ್ಥೆಯ ಮಳಿಗೆ ಹಾಗೂ ಗೋಡೌನ್ ಮೇಲೆ ದಿಢೀರ್ ದಾಳಿ ಮಾಡಿದೆ. ತಪಾಸಣೆ ವೇಳೆ ಅಲ್ಲಿ ದಾಸ್ತಾನು ಇರಿಸಲಾಗಿದ್ದ ಹಲವು ಮೊಟ್ಟೆಗಳ ಪ್ಯಾಕೆಟ್‌ಗಳು ಈಗಾಗಲೇ ಒಡೆದು ಹೋಗಿ, ತೀವ್ರ ದುರ್ವಾಸನೆ ಬೀರುತ್ತಾ ಕೊಳೆತು ನಾರುತ್ತಿರುವುದು ಪತ್ತೆಯಾಗಿದೆ.

ಇನ್ನು ಗ್ರಾಹಕರ ಆರೋಗ್ಯಕ್ಕೆ ಮಾರಕವಾಗಬಲ್ಲ ಇಂತಹ ಕೊಳೆತ ಹಾಗೂ ಒಡೆದ ಮೊಟ್ಟೆಗಳ ಪ್ಯಾಕೆಟ್‌ಗಳನ್ನು ತಕ್ಷಣವೇ ಸ್ಥಳದಿಂದ ತೆರವುಗೊಳಿಸುವಂತೆ ಅಧಿಕಾರಿಗಳು ಬ್ಲಿಂಕಿಟ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಶುಚಿತ್ವದ ಕೊರತೆ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿ ಗೋದಾಮನ್ನು ಅಧಿಕಾರಿಗಳು ಮುಚ್ಚಿಸಿ ಸೀಲ್ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post