ಉಳ್ಳಾಲ, ಡಿ.14 : ಮುಂಜಾನೆ ಜಾಗಿಂಗ್ ತೆರಳಿದ್ದ ಯುವಕನೋರ್ವ ಮನೆಗೆ ಮರಳಿದ ಬಳಿಕ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಅಸೈಗೋಳಿ ಸೈಟ್ ಎಂಬಲ್ಲಿ ನಡೆದಿದೆ.

ಅಸೈಗೋಳಿ ಸೈಟ್ ಅಯ್ಯಪ್ಪ ಮಂದಿರದ ಬಳಿಯ ನಿವಾಸಿ ಅಭಿಲಾಷ್ ಶೆಟ್ಟಿ(36) ಆತ್ಮಹತ್ಯೆಗೈದ ಯುವಕ. ಅಭಿಲಾಷ್ ಈ ಹಿಂದೆ ಮೆಡಿಕಲ್ ರೆಫ್ ಆಗಿ ಕೆಲಸ ಮಾಡುತ್ತಿದ್ದು ಕೆಲ ತಿಂಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದರೆನ್ನಲಾಗಿದೆ. ಹೀಗಾಗಿ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

ಎಂದಿನಂತೆ ಬೆಳಿಗ್ಗೆ ಜಾಗಿಂಗ್ ಗೆ ತೆರಳಿದ್ದ ಈತ ಬುಧವಾರ ಕೂಡಾ ಮನೆಗೆ ಮರಳಿದ್ದು, ಮನೆ ಮಂದಿ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಮನೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಭಿಲಾಷ್ ಮೊಬೈಲನ್ನ ವಶಕ್ಕೆ ಪಡೆದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ಅಭಿಲಾಷ್ ತಂದೆ, ತಾಯಿ, ಸಹೋದರ, ಸಹೋದರಿಯನ್ನ ಅಗಲಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post