• About us
  • Contact us
  • Disclaimer
Saturday, December 6, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಾನವೀಯ ದೃಷ್ಟಿಯಿಂದ ಉಕ್ರೇನ್ ನಲ್ಲಿ ರಷ್ಯಾ ಕದನ ವಿರಾಮ ಘೋಷಣೆ

Coastal Times by Coastal Times
March 5, 2022
in ವಿದೇಶಿ ಸುದ್ದಿ
ಮಾನವೀಯ ದೃಷ್ಟಿಯಿಂದ ಉಕ್ರೇನ್ ನಲ್ಲಿ ರಷ್ಯಾ ಕದನ ವಿರಾಮ ಘೋಷಣೆ
21
VIEWS
WhatsappTelegramShare on FacebookShare on Twitter

ಮಾಸ್ಕೊ: ರಷ್ಯಾ-ಉಕ್ರೇನ್ ನಡುವೆ ಸೇನಾಪಡೆ ಯುದ್ಧಕ್ಕೆ ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಗೋಚರಿಸುತ್ತಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 11.30ರ ಹೊತ್ತಿಗೆ ರಷ್ಯಾ ಉಕ್ರೇನ್ ಮೇಲೆ ಕದನ ವಿರಾಮ ಘೋಷಣೆ  ಮಾಡಿದೆ.

ಮಾನವೀಯ ದೃಷ್ಟಿಯಿಂದ ಉಕ್ರೇನ್ ನಾದ್ಯಂತ ಕದನ ವಿರಾಮ ಘೋಷಣೆ ಮಾಡಲಾಗಿದೆ ಎಂದು ರಷ್ಯಾ ಘೋಷಣೆ ಮಾಡಿದೆ. ನಾಗರಿಕರಿಗೆ ಮಾನವೀಯ ಕಾರಿಡಾರ್ ಗಳನ್ನು  ಮುಕ್ತಗೊಳಿಸಲಾಗುವುದು ಎಂದು ಹೇಳಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿದ 10 ದಿನಗಳ ನಂತರ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ.

ಇದು ತಾತ್ಕಾಲಿಕ ಯುದ್ಧ ವಿರಾಮ ಘೋಷಣೆಯೇ, ಎಷ್ಟು ಹೊತ್ತಿನವರೆಗೆ ಅಥವಾ ದಿನಗಳವರೆಗೆ ಇರುತ್ತದೆ ಎಂದು ಕಾದುನೋಡಬೇಕಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆದಿದ್ದರೂ ಯಾವುದೇ ನಿರ್ಧಾರ ಅಥವಾ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ.

ಇಂದು ಮಾರ್ಚ್ 5, ರಷ್ಯಾ ಸಮಯ ಬೆಳಿಗ್ಗೆ 10ರಿಂದ ಯುದ್ಧ ವಿರಾಮ ಘೋಷಣೆ ಮಾಡಲಾಗಿದೆ. ಮರಿಯಪೋಲ್ ಮತ್ತು ವೋಲ್ನೋವಾಖಾದಿಂದ ನಾಗರಿಕರ ನಿರ್ಗಮನಕ್ಕಾಗಿ ಮಾನವೀಯ ಕಾರಿಡಾರ್‌ಗಳನ್ನು ರಷ್ಯಾ ಸರ್ಕಾರ ತೆರೆಯುತ್ತದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾದ ಪಡೆಗಳು ಉಕ್ರೇನಿಯನ್ ಬಂದರು ನಗರವಾದ ಮರಿಯಪೋಲ್ ಅನ್ನು ದಿಗ್ಬಂಧನಗೊಳಿಸಿವೆ ಎಂದು ಮರಿಯಪೋಲ್ ಮೇಯರ್ ವಾಡಿಮ್ ಬಾಯ್ಚೆಂಕೊ ತಿಳಿಸಿದ್ದಾರೆ.ರಷ್ಯಾದ ಪಡೆಗಳು ಕಳೆದ ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು, ರಷ್ಯಾ ಉಕ್ರೇನ್‌ನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಘಟಕಗಳಾಗಿ ಗುರುತಿಸಿದ ಮೂರು ದಿನಗಳ ನಂತರ ಯುದ್ಧ ಘೋಷಣೆಯಾಗಿತ್ತು.

ಈ ವಾರಾಂತ್ಯದಲ್ಲಿ ರಷ್ಯಾ ಜೊತೆ ಉಕ್ರೇನ್ ಮಾತುಕತೆಗೆ ಯೋಜಿಸಿದೆ ಎಂದು ಕೀವ್ ನ ಸಮಾಲೋಚಕರೊಬ್ಬರು ತಿಳಿಸಿದ್ದಾರೆ.

ಸ್ಥಳಾಂತರಕ್ಕೆ ಅವಕಾಶ: 

ರಷ್ಯಾ ಇದೀಗ ಕದನ ವಿರಾಮ ಘೋಷಣೆ ಮಾಡಿರುವುದರಿಂದ ಬಂದರು ನಗರಿ ಮರಿಯಪೋಲ್ ಸೇರಿದಂತೆ ಎರಡು ದೊಡ್ಡ ನಗರಗಳ ನಾಗರಿಕರಿಗೆ ಸ್ಥಳಾಂತರಕ್ಕೆ ಅವಕಾಶ ಸಿಕ್ಕಿದೆ, ಕದನ ವಿರಾಮ ಘೋಷಣೆಯಿಂದ ಮಾರಿಯುಪೋಲ್ ಮತ್ತು ವೊಲ್ನೊವಕ್ಹ ನಗರಗಳ ನಾಗರಿಕರಿಗೆ ಸ್ಥಳಾಂತರಕ್ಕೆ ಅವಕಾಶ ಸಿಗಲಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ರಥಬೀದಿಯ ಡಾ.ಪಿ. ದಯಾನಂದ ಪೈ–ಪಿ. ಸತೀಶ್‌ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್‌ ವಿವಾದ – ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ

Next Post

ತೊಕ್ಕೊಟ್ಟು: ಮೀನು ಮಾರಾಟಗಾರನ ಮೇಲೆ‌ ತಲವಾರಿನಿಂದ ದಾಳಿ: 2 ಲಕ್ಷ ದರೋಡೆ

Related Posts

ವೆನೆಜುವೆಲಾ ಹಕ್ಕುಗಳ ಹೋರಾಟಗಾರ್ತಿ ಮಾರಿಯಾ ಕೊರಿನಾಗೆ ನೊಬೆಲ್ ಶಾಂತಿ ಪ್ರಶಸ್ತಿ: ಟ್ರಂಪ್​ಗೆ ಭಾರಿ ಮುಖಭಂಗ
ವಿದೇಶಿ ಸುದ್ದಿ

ವೆನೆಜುವೆಲಾ ಹಕ್ಕುಗಳ ಹೋರಾಟಗಾರ್ತಿ ಮಾರಿಯಾ ಕೊರಿನಾಗೆ ನೊಬೆಲ್ ಶಾಂತಿ ಪ್ರಶಸ್ತಿ: ಟ್ರಂಪ್​ಗೆ ಭಾರಿ ಮುಖಭಂಗ

October 11, 2025
19
ವಿಯೆಟ್ನಾಂನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಂಗಳೂರಿನ‌ ಬಾಲಪ್ರತಿಭೆ ರುಶಭ್ ರಾವ್
ರಾಷ್ಟ್ರೀಯ ಸುದ್ದಿ

ವಿಯೆಟ್ನಾಂನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಂಗಳೂರಿನ‌ ಬಾಲಪ್ರತಿಭೆ ರುಶಭ್ ರಾವ್

August 27, 2025
53
Next Post
ತೊಕ್ಕೊಟ್ಟು: ಮೀನು ಮಾರಾಟಗಾರನ ಮೇಲೆ‌ ತಲವಾರಿನಿಂದ ದಾಳಿ: 2 ಲಕ್ಷ ದರೋಡೆ

ತೊಕ್ಕೊಟ್ಟು: ಮೀನು ಮಾರಾಟಗಾರನ ಮೇಲೆ‌ ತಲವಾರಿನಿಂದ ದಾಳಿ: 2 ಲಕ್ಷ ದರೋಡೆ

Discussion about this post

Recent News

ಕಿನ್ನಿಗೋಳಿಯ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಬ್ಯಾಂಕ್ ಮ್ಯಾನೇಜರ್ ಪ್ರಜ್ಞೆಯಿಂದ ಉಳಿಯಿತು 84 ಲಕ್ಷ ಹಣ !

ಕಿನ್ನಿಗೋಳಿಯ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಬ್ಯಾಂಕ್ ಮ್ಯಾನೇಜರ್ ಪ್ರಜ್ಞೆಯಿಂದ ಉಳಿಯಿತು 84 ಲಕ್ಷ ಹಣ !

December 5, 2025
53
ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ನಿಂದ ಸಾಂತ್ವನದ ಸಂಚಾರ 3.0

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ನಿಂದ ಸಾಂತ್ವನದ ಸಂಚಾರ 3.0

December 4, 2025
40
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಿನ್ನಿಗೋಳಿಯ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಬ್ಯಾಂಕ್ ಮ್ಯಾನೇಜರ್ ಪ್ರಜ್ಞೆಯಿಂದ ಉಳಿಯಿತು 84 ಲಕ್ಷ ಹಣ !

ಕಿನ್ನಿಗೋಳಿಯ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಬ್ಯಾಂಕ್ ಮ್ಯಾನೇಜರ್ ಪ್ರಜ್ಞೆಯಿಂದ ಉಳಿಯಿತು 84 ಲಕ್ಷ ಹಣ !

December 5, 2025
ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ನಿಂದ ಸಾಂತ್ವನದ ಸಂಚಾರ 3.0

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ನಿಂದ ಸಾಂತ್ವನದ ಸಂಚಾರ 3.0

December 4, 2025
ಮಂಗಳೂರು: ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠಕ್ಕೆ 5 ಎಕರೆ ಜಮೀನು ಸಿಎಂ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠಕ್ಕೆ 5 ಎಕರೆ ಜಮೀನು ಸಿಎಂ ಘೋಷಣೆ

December 4, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d